ಕನ್ಹಯ್ಯಾ ವಿರುದ್ಧ ದೂರು ದಾಖಲಿಸಿದ ಮಾಜಿ ಯೋಧ

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ ವಿರುದ್ಧ ಮಾಜಿ ಸೈನಿಕ...
ಕನ್ಹಯ್ಯಕುಮಾರ್
ಕನ್ಹಯ್ಯಕುಮಾರ್
ಧರ್ಮಶಾಲಾ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ ವಿರುದ್ಧ ಮಾಜಿ ಸೈನಿಕ ಕಹಾನ್ ಸಿಂಗ್ ಠಾಕುರ್ ದೂರು ದಾಖಲಿಸಿದ್ದಾರೆ. 
ಭಾರತೀಯ ಸೇನೆ ಬಗ್ಗೆ ಅವಹೇಳನಾಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ರಾಷ್ಟ್ರೀಯ ಶೂಟರ್ ನಿವೃತ್ತ ಯೋಧ ಕಹಾನ್ ಸಿಂಗ್ ಅವರು ಜಿಲ್ಲಾ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.
ಕಂಗ್ರಾ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯದಲ್ಲಿ ಐಪಿಸಿ ಸೆಕ್ಷನ್ 124-ಎ(ದೇಶದ್ರೋಹ), 499(ಮಾನನಷ್ಟ), 500(ಮಾನನಷ್ಟಕ್ಕೆ ಶಿಕ್ಷೆ), 504(ಶಾಂತಿ ಕದಡಲು ಉದ್ದೇಶಪೂರ್ವಕವಾಗಿ ಹೇಳಿಕೆ), 505, 511(ಉದ್ದೇಶಪೂರ್ವಕವಾಗಿ ಅಪರಾಧಗಳು ಮಾಡುವ ಯತ್ನ) ಅಡಿ ದೂರು ದಾಖಲಿಸಲಾಗಿದೆ. 
ಜೆಎನ್ ಯು ವಿದ್ಯಾರ್ಥಿ ಕನ್ಹಯ್ಯಾ ಕುಮಾರ್ ವಿರುದ್ಧ ದೂರು ದಾಖಲಿಸಿದ್ದೇನೆ. ತನ್ನ ಹೇಳಿಕೆಯನ್ನು ಕನ್ಹಯ್ಯಾ ಹಿಂಪಡೆಯಬೇಕು, ಇಲ್ಲದಿದ್ದರೆ, ಪ್ರಕರಣವನ್ನು ಎದುರಿಸಬೇಕಾಗುತ್ತದೆ ಎಂದು ನಿವೃತ್ತ ಯೋಧ ಕಹಾನ್ ಸಿಂಗ್ ಠಾಕುರ್ ಹೇಳಿದ್ದಾರೆ. 
ಈ ಕುರಿತು ಮಾರ್ಚ್ 27ರೊಳಗೆ ಪ್ರತಿಕ್ರಯಿಸುವಂತೆ ಸಮಯ ನೀಡಲಾಗಿತ್ತು. ಆದರೆ, ಕನ್ಹಯ್ಯಾ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕ್ಷಮೆ ಕೂಡ ಯಾಚಿಸಿಲ್ಲ ಎಂದು ಅವರು ತಿಳಿಸಿದ್ದಾರೆ. 
ದೆಹಲಿ ಮಹಿಳಾ ದಿನಾಚರಣೆ ದಿನದಂದು ಕನ್ಹಯ್ಯಾ ಕುಮಾರ್, ಸೈನಿಕರೊಂದಿಗೆ ಅತೀವ ಗೌರವಿದೆ. ಹಾಗಿದ್ದರೂ ಕಾಶ್ಮೀರದಲ್ಲಿ ಭಾರತೀಯ ಸೇನೆ ಯುವತಿಯರ ಬಲತ್ಕಾರ ನಡೆಸುತ್ತಿದೆ ಎಂದು ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದರು. ಇತ್ತೀಚೆಗಷ್ಟೇ ದೇಶದ್ರೋಹ ಆರೋಪದಲ್ಲಿ ಬಂಧಕ್ಕೊಳಗಾಗಿ ನಂತರ ಜಾಮೀನಿನ ಮೇಲೆ ಕನ್ಹಯ್ಯಾ ಬಿಡುಗಡೆಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com