ಎಸ್ಸಿ, ಎಸ್ಟಿ, ಹಿಂದುಳಿದ ಮತ್ತು ವಿಕಲಚೇತನರಿಗೆ ಐಐಟಿಗಳಲ್ಲಿ ಉಚಿತ ಶಿಕ್ಷಣ: ಸ್ಮೃತಿ ಇರಾನಿ ಭರವಸೆ

ಭಾರತೀಯ ತಾಂತ್ರಿಕ ಸಂಸ್ಥೆಯ(ಐಐಟಿ)ಲ್ಲಿ ಅಧ್ಯಯನ ನಡೆಸುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಇತರ ಹಿಂದುಳಿದ ಮತ್ತು ವಿಕಲಚೇತನರ ಶುಲ್ಕ ಮನ್ನಾ...
ಎಸ್ಸಿ, ಎಸ್ಟಿ, ಹಿಂದುಳಿದ ಮತ್ತು ವಿಕಲಚೇತನರಿಗೆ ಐಐಟಿಗಳಲ್ಲಿ ಉಚಿತ ಶಿಕ್ಷಣ: ಸ್ಮೃತಿ ಇರಾನಿ ಭರವಸೆ

ನವದೆಹಲಿ: ಭಾರತೀಯ ತಾಂತ್ರಿಕ ಸಂಸ್ಥೆಯ(ಐಐಟಿ)ಲ್ಲಿ ಅಧ್ಯಯನ ನಡೆಸುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಇತರ ಹಿಂದುಳಿದ ಮತ್ತು ವಿಕಲಚೇತನರ ಶುಲ್ಕ ಮನ್ನಾ ಮಾಡಲಾಗುವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಭರವಸೆ ನೀಡಿದ್ದಾರೆ.

ಈ ಸಂಬಂಧ ಶೀಘ್ರವೇ ಕೇಂದ್ರ ಸರ್ಕಾರ ಘೋಷಣೆ ಮಾಡಲಿದೆ. ಇದರಿಂದ ಐಐಟಿಯ ಸುಮಾರು 60 ಸಾವಿರದ 471 ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ.

ಇದಲ್ಲದೆ 5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬಗಳ ಮಕ್ಕಳಿಗೆ ಶುಲ್ಕದಲ್ಲಿ ಶೇಕಡಾ 66ರಷ್ಟು ವಿನಾಯಿತಿ ಸಿಗಲಿದೆ. ಪ್ರಸ್ತುತ ಐಐಟಿಯಲ್ಲಿ ಪರಿಶಿಷ್ಟ ಜಾತಿಯವರಿಗೆ ಶೇಕಡಾ 15, ಪರಿಶಿಷ್ಟ ವರ್ಗದವರಿಗೆ ಶೇಕಡಾ 7.5ರಷ್ಟು ಹಾಗೂ ಇತರ ಹಿಂದುಳಿದ ವರ್ಗದವರಿಗೆ ಶೇಕಡಾ 27ರಷ್ಟು ಮೀಸಲಾತಿ ಸೌಲಭ್ಯವಿದೆ. ಶುಲ್ಕ ಪಾವತಿಯಲ್ಲಿ ಶೇಕಡಾ 66ರಷ್ಟು ಮೀಸಲಾತಿ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದವರಿಗೆ ಸಹಾಯವಾಗುತ್ತಿತ್ತು.
ಐಐಟಿಯ ಬೋಧನಾ ವರ್ಗದಲ್ಲಿ ಪ್ರಸ್ತುತ ಯಾವುದೇ ಮೀಸಲಾತಿಯಿಲ್ಲ.
ಐಐಟಿ, ಉನ್ನತ ಶಿಕ್ಷಣದ ಸ್ವಾಯತ್ತ ಸಾರ್ವಜನಿಕ ಸಂಸ್ಥೆ. 1961ರ ತಂತ್ರಜ್ಞಾನ ಸಂಸ್ಥೆಗಳ ಕಾಯಿದೆಯಡಿಯಲ್ಲಿ ಆಡಳಿತ ನಡೆಸಲಾಗುತ್ತದೆ.  

ದೇಶಾದ್ಯಂತ ಒಟ್ಟು 23 ಐಐಟಿ ಕೇಂದ್ರಗಳಿವೆ. ಬಿಲೈ, ಚೆನ್ನೈ, ದಂದನ್, ಧಾರವಾಡ, ಗೋವಾ, ಗುವಾಹಟಿ, ಜಮ್ಮು, ಕಾನ್ಪುರ, ಖಾರಾಗ್ಪುರ್, ಮುಂಬೈ, ರೂರ್ಕೆಲಾ, ಭುವನೇಶ್ವರ, ಗಾಂಧಿನಗರ, ಹೈದರಾಬಾದ್, ಇಂದೋರ್, ಜೋದ್ ಪುರ್, ಮಂಡಿ, ಪಾಲಕ್ಕಾಡ್, ಪಾಟ್ನಾ, ರೋಪರ್, ತಿತುಪತಿ ಮತ್ತು ವಾರಣಾಸಿಗಳಲ್ಲಿವೆ.

ಮುಂದಿನ ವರ್ಷದಿಂದ ಐಐಟಿಗಳಲ್ಲಿ ಪದವಿಪೂರ್ವ ಮತ್ತು ಸ್ನಾತಕೋತ್ತರ ಅಧ್ಯಯನಗಳಿಗೆ ವಿದೇಶಗಳ ವಿದ್ಯಾರ್ಥಿಗಳಿಗೂ ಪ್ರವೇಶಾವಕಾಶ ನೀಡಲಾಗುತ್ತದೆ. ಈ ಬಗ್ಗೆ ಮುಂದಿನ ಐಐಟಿ ಸಮಿತಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.

ಐಐಟಿಗಳಲ್ಲಿ ಪ್ರವೇಶ ಸಂಖ್ಯೆಯನ್ನು 100ರಿಂದ 200ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ಅವಲೋಕಿಸುತ್ತಿದೆ. ಇದು ಒಂದು ಐಐಟಿ ಕೇಂದ್ರದಿಂದ ಇನ್ನೊಂದು ಕೇಂದ್ರಕ್ಕೆ ವ್ಯತ್ಯಾಸವಾಗಬಹುದು. ವಿದೇಶಿ ವಿದ್ಯಾರ್ಥಿಗಳು ಸಂಪೂರ್ಣ ಶುಲ್ಕ ಕಟ್ಟಬೇಕಾಗುತ್ತದೆ. ಕೆಲವೊಂದು ದೇಶಗಳ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುವ ಬಗ್ಗೆಯೂ ಕೇಂದ್ರ ಸರ್ಕಾರ ಪರಿಶೀಲನೆ ನಡೆಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com