ಇತ್ತೀಚೆಗೆ ಬೆಲ್ಜಿಯಂ, ಅಮೆರಿಕ ಮತ್ತು ಸೌದಿ ಅರೇಬಿಯಾಕ್ಕೆ ಪ್ರವಾಸ ಕೈಗೊಂಡ ಮೋದಿ ಮೂರು ರಾತ್ರಿಗಳನ್ನು ವಿಮಾನದಲ್ಲೇ ಕಳೆದಿದ್ದಾರೆ. ಮಾರ್ಚ್ 30ರಿಂದ ಏಪ್ರಿಲ್ 2ನೇ ತಾರೀಖಿನವರೆಗೆ ವಿದೇಶ ಪ್ರವಾಸ ಕೈಗೊಂಡಿದ್ದ ಇವರು, ಮೊದಲನೇ ದಿನ ದೆಹಲಿಯಿಂದ ಬ್ರುಸೆಲ್ಸ್ ಗೆ ಹೋಗುವ ವೇಳೆ ರಾತ್ರಿ ವಿಮಾನದಲ್ಲೇ ನಿದ್ದೆ ಮಾಡಿದ್ದ ಮೋದಿ, ಇನ್ನೊಂದು ದಿನ ಬ್ರುಸೆಲ್ಸ್ ನಿಂದ ವಾಷಿಂಗ್ಟನ್ ಡಿಸಿ ಪ್ರಯಾಣದ ವೇಳೆ ಮತ್ತು ಮೂರನೇ ದಿನ ಅಮೆರಿಕದಿಂದ ರಿಯಾದ್‌ಗೆ ಪ್ರಯಾಣ ಮಾಡುವ ವೇಳೆ ವಿಮಾನದಲ್ಲೇ ನಿದ್ದೆ ಮಾಡುವ ಮೂಲಕ ಸಮಯದ ಸದುಪಯೋಗ ಮಾಡಿಕೊಂಡಿದ್ದಾರೆ.