ಮುಂಬೈ: ಇಲ್ಲಿನ ಶನಿ ಸಿಂಗಣಾಪುರ ದೇವಾಲಯ ಪ್ರವೇಶಿಸಲು ಮಹಿಳೆಯರಿಗೆ ಅವಕಾಶ ನೀಡಬೇಕೆಂದು ಹೋರಾಡಿದ್ದ ಭೂಮಾತಾ ಬ್ರಿಗೇಡ್‌ನ ಸಾಮಾಜಿಕ ಕಾರ್ಯಕರ್ತೆ ಆ ಹೋರಾಟದಲ್ಲಿ ಜಯ ಗಳಿಸಿದ ನಂತರ ಇದೀಗ ಕೋಲ್ಹಾಪುರ ಮಹಾಲಕ್ಷ್ಮಿ ದೇಗುಲ ಪ್ರವೇಶ ಹೋರಾಟದತ್ತ ಗುರಿ ನೆಟ್ಟಿದ್ದಾರೆ.
ಮಹಿಳೆಯರಿಗೆ ದೇವಾಲಯ ಪ್ರವೇಶ ನಿರಾಕರಿಸಿರುವ ದೇವಾಲಯಗಳ ವಿರುದ್ಧ ತೃಪ್ತಿ ಹೋರಾಟ ನಡೆಸುತ್ತಿದ್ದಾರೆ. ಶುಕ್ರವಾರ ಯುಗಾದಿ ಹಬ್ಬದ ಸುದಿನದಂದೇ ತೃಪ್ತಿ ಅವರ ನೇತೃತ್ವದಲ್ಲಿ ಮಹಿಳೆಯರು ಶನಿ ಸಿಂಗಣಾಪುರ ದೇವಾಲಯದ ಗರ್ಭಗುಡಿಗೆ ಪ್ರವೇಶಿಸಿ 4 ಶತಮಾನಗಳ ಸಂಪ್ರದಾಯವನ್ನು ಮುರಿದಿದ್ದರು.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ತೃಪ್ತಿ ಇದು ಆರಂಭವಷ್ಟೇ. ದೇವಾಲಯ ಪ್ರವೇಶದಲ್ಲಿ ಲಿಂಗ ತಾರತಮ್ಯ ತೋರಿಸಿದರೆ ನಾವು ಅದರ ವಿರುದ್ಧ ಹೋರಾಟ ಮಾಡಿಯೇ ತೀರುತ್ತೇವೆ. ಏಪ್ರಿಲ್ 13 ರಂದು ನಾವು ಕೋಲ್ಹಾಪುರ ಮಹಾಲಕ್ಷ್ಮಿ ದೇಗುಲಕ್ಕೆ ಪ್ರವೇಶಿಸಲು ತೀರ್ಮಾನಿಸಿದ್ದೇವೆ ಎಂದು ಹೇಳಿದ್ದಾರೆ.