ಜಾರ್ಖಂಡ್ ಕ್ರೀಡಾಪಟುಗಳಿಗೆ ಶೇ.2 ರಷ್ಟು ಉದ್ಯೋಗ ಮೀಸಲಾತಿ: ಸಿಎಂ ರಘುಬರ್ ದಾಸ್

ಜಾರ್ಖಂಡ್ ನ ಪ್ರತಿಭಾವಂತ ಕ್ರೀಡಾಪಟುಗಳಿಗೆ ಶೇ.2 ರಷ್ಟು ಉದ್ಯೋಗ ಮೀಸಲಾತಿ ನೀಡುವುದಾಗಿ ಜಾರ್ಖಂಡ್ ಸರ್ಕಾರ ಘೋಷಿಸಿದೆ.
ರಘುಬರ್ ದಾಸ್
ರಘುಬರ್ ದಾಸ್

ಖಾರ್ಸಾವನ್: ಜಾರ್ಖಂಡ್ ನ ಪ್ರತಿಭಾವಂತ ಕ್ರೀಡಾಪಟುಗಳಿಗೆ ಶೇ.2 ರಷ್ಟು ಉದ್ಯೋಗ ಮೀಸಲಾತಿ ನೀಡುವುದಾಗಿ ಜಾರ್ಖಂಡ್ ಸರ್ಕಾರ ಘೋಷಿಸಿದೆ.
ಈ ವರೆಗೂ ಪೊಲೀಸ್ ಇಲಾಖೆಯಲ್ಲಿ ಮಾತ್ರ ಕ್ರೀಡಾಪಟುಗಳಿಗೆ ಉದ್ಯೋಗ ನೀಡಲಾಗುತ್ತಿತ್ತು. ಇನ್ನು ಮುಂದೆ ಕ್ರೀಡಾಪಟುಗಳಿಗೆ ಎಲ್ಲಾ ಇಲಾಖೆಗಳಲ್ಲೂ ಉದ್ಯೋಗ ಪಡೆಯುವ ಅವಕಾಶ ಕಲ್ಪಿಸಲಾಗುತ್ತದೆ ಎಂದು ಜಾರ್ಖಂಡ್ ಸಿಎಂ ರಘುಬರ್ ದಾಸ್ ತಿಳಿಸಿದ್ದಾರೆ. ರಾಷ್ಟ್ರೀಯ ಬಿಲ್ಲುಗಾರಿಕೆ ಚಾಂಪಿಯನ್ಷಿಪ್ ನ್ನು ಉದ್ಘಾಟಿಸಿ ಮಾತನಾಡಿದ ರಘುಬರ್ ದಾಸ್, ಪದಕ ಪಡೆಯುವ ಪ್ರತಿಭಾವಂತ ಕ್ರೀಡಾಪಟುಗಳಿಗೆ ಈ ವರೆಗೂ ಪೊಲೀಸ್ ಇಲಾಖೆಯಲ್ಲಿ ಮಾತ್ರ ಶೇ.2 ರಷ್ಟು ಉದ್ಯೋಗ ಮೀಸಲಾತಿ ಇತ್ತು. ಇನ್ನು ಮುಂದೆ ಈ ಮೀಸಲಾತಿ ಸೌಲಭ್ಯ ಎಲ್ಲಾ ಇಲಾಖೆಗಳಿಗೂ ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ.
ಕ್ರೀಡಾಪಟುಗಳನ್ನು ಉತ್ತೇಜಿಸುವ ಸಲುವಾಗಿ ಪ್ರತಿ ಜಿಲ್ಲೆ, ಪಂಚಾಯತ್ ಮಟ್ಟದಲ್ಲಿ ಕಮಲ್( ಲೋಟಸ್) ಕ್ಲಬ್ ಪ್ರಾರಂಭ ಮಾಡಲಾಗುವುದು, ಇನ್ನೊಂದು ತಿಂಗಳಲ್ಲಿ ಖಾರ್ಸಾವನ್ ನಲ್ಲಿ ಫುಟ್ಬಾಲ್ ತರಬೇತಿ ಕೇಂದ್ರ ಪ್ರಾರಂಭ  ಮಾಡುವುದಾಗಿ ರಘುಬರ್ ದಾಸ್ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com