ಈ ವರ್ಷ ಸಾಧಾರಣ ನೈರುತ್ಯ ಮಾನ್ಸೂನ್ ಮಳೆ ನಿರೀಕ್ಷೆ

ಎರಡು ವರ್ಷಗಳಿಂದ ಮಳೆ ಕೊರತೆಯಿಂದ ಬೇಸತ್ತಿರುವ ದೇಶದ ರೈತನಿಗೆ ಸಿಹಿ ಸುದ್ದಿಯಿದೆ. ಈ ಬಾರಿ ನೈರುತ್ಯ ಮಾನ್ಸೂನ್ ಮಳೆ ಸಾಧಾರಣವಾಗಿ ಬೀಳಲಿದ್ದು ಆತಂಕ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಎರಡು ವರ್ಷಗಳಿಂದ ಮಳೆ ಕೊರತೆಯಿಂದ ಬೇಸತ್ತಿರುವ ದೇಶದ ರೈತನಿಗೆ ಸಿಹಿ ಸುದ್ದಿಯಿದೆ.  ಈ ಬಾರಿ ನೈರುತ್ಯ ಮಾನ್ಸೂನ್ ಮಳೆ ಸಾಧಾರಣವಾಗಿ ಬೀಳಲಿದ್ದು ಆತಂಕ ಪಡುವ ಅಗತ್ಯವಿಲ್ಲ ಎಂದು ಕೇಂದ್ರ ಕೃಷಿ ಇಲಾಖೆ ತಿಳಿಸಿದೆ.

ಈ ಬಾರಿಯ ಮುಂಗಾರು ಮಳೆ ಸಾಧಾರಣವಾಗಿದ್ದು, ಎಲ್ಲಾ ರಾಜ್ಯಗಳ ರೈತರು ಕೃಷಿ ಬಿತ್ತನೆಗಾಗಿ  ಅಗತ್ಯ ತಯಾರಿಗಳನ್ನು ಮಾಡಿಕೊಳ್ಳಬಹುದು. ಜೂನ್ ನಲ್ಲಿ ಖಾರೀಫ್ ಬೆಳೆ ಆರಂಭವಾಗಲಿದೆ.

ಈ ತಿಂಗಳ ಅಂತ್ಯದಲ್ಲಿ ಕೇಂದ್ರ ಹವಾಮಾನ ಇಲಾಖೆ ಈ ಬಾರಿಯ ಮಾನ್ಸೂನ್ ಮಳೆಯ ಸ್ಪಷ್ಟ ಚಿತ್ರಣ ನೀಡಲಿದೆ ಎಂದು ಅವರು ಹೇಳಿದ್ದಾರೆ,

ಎಲ್ ನಿನೋ ಪ್ರಭಾವ ತಗ್ಗುತ್ತಿದ್ದು ಈ ವರ್ಷ ಉತ್ತಮ ಮಾನ್ಸೂನ್ ನಿರೀಕ್ಷೆ ಮಾಡಲಾಗುತ್ತಿದೆ ಎಂದು ಕೃಷಿ ಇಲಾಖೆ ಕಾರ್ಯದರ್ಶಿ ಶೋಭನಾ ಕೆ. ಪಟ್ನಾಯಕ್ ಹೇಳಿದ್ದಾರೆ,


ಕಳೆದ ವರ್ಷ ಮಳೆಯ ಕೊರತೆಯಿಂದ ಆಹಾರ ಉತ್ಪಾದನೆಯಲ್ಲಿ ಪ್ರಗತಿ ಕುಂಠಿತವಾಗಿತ್ತು,  2014-15 ರಲ್ಲಿ ಭಾರತದ ಆಹಾರ ಉತ್ಪಾದನಾ ಪ್ರಮಾಣ 252.02 ಮಿಲಿಯನ್ ಟನ್ ಕೊರತೆಯಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com