ಕೇರಳ ಪಟಾಕಿ ಸ್ಪೋಟ ಪ್ರಕರಣ: ಕೊಲ್ಲಂ ದೇವಳದಲ್ಲಿ ಸ್ಪೋಟಕಗಳಿದ್ದ 3 ಕಾರು ವಶಕ್ಕೆ

ಕೇರಳದ ಕೊಲ್ಲಂ ಜಿಲ್ಲೆಯ ಪಾರವೂರ್ ನ ಪುತ್ತಿಂಗಳ ದೇವಸ್ಥಾನದಲ್ಲಿ ಸಂಭವಿಸಿದ ಪಟಾಕಿ ಸ್ಪೋಟದ ಬೆನ್ನಲ್ಲೇ ದೇವಳದ ಬಳಿ ಸ್ಪೋಟಕ ತುಂಬಿದ ಮೂರು...
ವಶಕ್ಕೆ ಪಡೆದ ಕಾರುಗಳು
ವಶಕ್ಕೆ ಪಡೆದ ಕಾರುಗಳು
ಕೊಲ್ಲಂ: ಕೇರಳದ ಕೊಲ್ಲಂ ಜಿಲ್ಲೆಯ ಪಾರವೂರ್ ನ ಪುತ್ತಿಂಗಳ ದೇವಸ್ಥಾನದಲ್ಲಿ ಸಂಭವಿಸಿದ ಪಟಾಕಿ ಸ್ಪೋಟದ ಬೆನ್ನಲ್ಲೇ ದೇವಳದ ಬಳಿ ಸ್ಪೋಟಕ ತುಂಬಿದ ಮೂರು ಕಾರುಗಳನ್ನು ಸೋಮವಾರ ವಶಕ್ಕೆ ಪಡೆಯಲಾಗಿದೆ.
ದೇವಸ್ಥಾನದ ಬಳಿಯೇ ಮೂರು ಕಾರುಗಳನ್ನು ನಿಲ್ಲಿಸಲಾಗಿದ್ದು ಕಾರಿನ ತುಂಬಾ ಸ್ಪೋಟಕಗಳು ತುಂಬಿಕೊಡಿದ್ದಾವೆ ಎಂದು ಸ್ಥಳಿಯರು ತಿಳಿಸಿದ್ದಾರೆ.
ಪಾರವೂರು ಪೊಲೀಸರು ಸ್ಥಳಕ್ಕಾಗಿಮಿಸಿದ್ದು ಕಾರಿನ ಸುತ್ತ ಹಗ್ಗ ಕಟ್ಟಿ ನಿರ್ಬಂಧ ಹೇರಿದ್ದಾರೆ. ಮಾಹಿತಿಗಳ ಪ್ರಕಾರ ಸ್ಥಳಕ್ಕೆ ಈಗಾಗಲೇ ಬಾಂಬ್ ನಿಷ್ಕ್ರಿಯ ದಳ ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.
ಭಾನುವಾರ ಮುಂಜಾವಿನ ವೇಳೆ ಮೂಕಾಂಬಿಕ ದೇಗುಲದಲ್ಲಿ ಪಟಾಕಿಗಳು ಸ್ಪೋಟಗೊಂಡು 110 ಮಂದಿ ಸಾವನ್ನಪ್ಪಿದ್ದರು, 380ಕ್ಕೂ ಅಧಿಕ ಮಂದಿ ಭಕ್ತರು ಗಾಯಗೊಂಡಿದ್ದರು. ಭಾನುವಾರ ಸಂಭವಿಸಿದ ಪ್ರಕರಣ ಕುರಿತು ತನಿಖಾಧಿಕಾರಿಗಳು ಇಂದು 5 ಮಂದಿಯನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com