ಪ್ರಧಾನಿ ಮೋದಿ ಜಾತ್ಯತೀತತೆ ಹಾಗೂ ಅಸಹಿಷ್ಣುತೆಯ ಬಲಿಪಶು: ನಖ್ವಿ

ಕಳೆದ 20 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರು 'ಜಾತ್ಯತೀತ ಗುಂಪಿನ' ಹಾಗೂ 'ಅಸಹಿಷ್ಣುತೆ'ಯ ಬಲಿಪಶುವಾಗಿದ್ದಾರೆ.
ಮುಖ್ತಾರ್ ಅಬ್ಬಾಸ್ ನಖ್ವಿ
ಮುಖ್ತಾರ್ ಅಬ್ಬಾಸ್ ನಖ್ವಿ
ಜೈಪುರ: ಕಳೆದ 20 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರು 'ಜಾತ್ಯತೀತ ಗುಂಪಿನ' ಹಾಗೂ 'ಅಸಹಿಷ್ಣುತೆ'ಯ ಬಲಿಪಶುವಾಗಿದ್ದಾರೆ. ಆದರೆ ಇದು ಅಭಿವೃದ್ಧಿ ಪರವಾದ ಮೋದಿ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಸೋಮವಾರ ಹೇಳಿದ್ದಾರೆ.
ಮೋದಿ ಅವರು ಕಳೆದ ಎರಡು ದಶಗಳಿಂದ ಜಾತ್ಯತೀತತೆ ಮತ್ತು ಅಸಹಿಷ್ಣುತೆಯ ಬಲಿಪಶುವಾಗಿದ್ದಾರೆ. ಆದರೆ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೂ ಅಭಿವೃದ್ಧಿ ಪರವಾಗಿದ್ದರು ಮತ್ತು ಈಗ ಪ್ರಧಾನಿಯಾದ ನಂತರವೂ ಬಡವರ ಹಾಗೂ ಯುವಕರ ಏಳಿಗೆಗಾಗಿ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.
ಮೋದಿ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿ ಅಜಂಡಾದ ಮೇಲೆ ಕೆಲಸ ಮಾಡುತ್ತಿದ್ದಾರೆ. ಆದರೆ ಹಗರಣಗಳ ಮೂಲಕ ದೇಶವನ್ನು ಲೂಟಿ ಮಾಡಿದವರಿಗೆ ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪ್ರತಿಪಕ್ಷಗಳಿಗೆ ನಖ್ವಿ ತಿರುಗೇಟು ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com