ಸಾಯಿಬಾಬಾ ಕುರಿತು ಸ್ವರೂಪಾನಂದ ಶ್ರೀಗಳ ಹೇಳಿಕೆ: ಭಕ್ತರ ತೀವ್ರ ವಿರೋಧ

ಮಹಾರಾಷ್ಟ್ರದಲ್ಲಿ ತೀವ್ರ ಬರಗಾಲವುಂಟಾಗಲು ಶಿರಡಿ ಸಾಯಿಬಾಬಾ ಅವರನ್ನು ಜನರು ಪೂಜಿಸುತ್ತಿರುವುದೇ ಕಾರಣ ಎಂದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶಿರಡಿ: ಮಹಾರಾಷ್ಟ್ರದಲ್ಲಿ ತೀವ್ರ ಬರಗಾಲವುಂಟಾಗಲು ಶಿರಡಿ ಸಾಯಿಬಾಬಾ ಅವರನ್ನು ಜನರು ಪೂಜಿಸುತ್ತಿರುವುದೇ ಕಾರಣ ಎಂದು ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ನೀಡಿರುವ ಹೇಳಿಕೆಗೆ ಸಾಯಿಬಾಬಾ ಭಕ್ತರು ವ್ಯಾಪಕ ಖಂಡನೆ ವ್ಯಕ್ತಪಡಿಸಿದ್ದಾರೆ.

ಈ ವಿವಾದಕ್ಕೆ ಸಂಬಂಧಪಟ್ಟಂತೆ ಯಾವುದೇ ಪ್ರತಿಕ್ರಿಯೆ ನೀಡಲು ಶಿರಡಿ ಸಾಯಿಬಾಬಾ ಟ್ರಸ್ಟ್ ಅಧಿಕಾರಿಗಳು ಮುಂದೆ ಬರದಿದ್ದರೂ, ಸ್ವಾಮೀಜಿಯವರು ಅಸುರಕ್ಷತೆ ಭಾವದಿಂದ ಇಂತಹ ಹೇಳಿಕೆ ನೀಡಿದ್ದಾರೆ ಎಂದು ಮಾಜಿ ಟ್ರಸ್ಟಿಯೊಬ್ಬರು ಹೇಳಿದ್ದಾರೆ.

ಭಕ್ತರು ಅವರ ದರ್ಶನಕ್ಕೆ ಹೋಗುವುದಿಲ್ಲ. ಅದರ ಬದಲಾಗಿ ಶಿರಡಿಗೆ ನಿತ್ಯವೂ ಸಾವಿರಾರು ಜನರು ಹೋಗುತ್ತಾರೆ ಎಂಬ ಭಾವನೆಯಿಂದ ಅವರು ತುಂಬಾ ಆತಂಕಕ್ಕೀಡಾಗಿದ್ದಾರೆ. ಭಕ್ತರಿಗೆ ಗೊಂದಲವನ್ನುಂಟುಮಾಡಲು ಹೀಗೆ ಹೇಳಿಕೆ ನೀಡಿದ್ದಾರೆ ಎಂದರು.

ಶಿರಡಿ ಸಾಯಿಬಾಬಾರನ್ನು ಪೂಜಿಸಿ ಮಹಾರಾಷ್ಟ್ರದಲ್ಲಿ ಇಷ್ಟೊಂದು ಬರಗಾಲ ಬಂದಿದೆ ಎಂದು ಅವರು ಹೇಳುವುದಾದಕೆ ಉತ್ತರಾಖಂಡದಲ್ಲಿ ಅಷ್ಟೊಂದು ನೆರೆ ಮತ್ತು ಭೂಕಂಪ ಏಕೆ ಉಂಟಾಯಿತು ಎಂಬುದಕ್ಕೆ ಅವರು ಉತ್ತರಿಸಲಿ ಎಂದು ದೇವಸ್ಥಾನದ ಮಾಜಿ ಟ್ರಸ್ಟಿ ಏಕನಾಥ ಗೊಂಡಕರ್ ಹೇಳಿದ್ದಾರೆ.

ಇನ್ನು ಭಕ್ತರು ಕೂಡ ಸ್ವರೂಪಾನಂದ ಸ್ವಾಮಿಯ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಸ್ವಾಮಿಗಳು ಪ್ರಚಾರ ಗಿಟ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಓರ್ವ ಭಕ್ತ ಹೇಳಿದ್ದಾರೆ.

ಸಾಯಿಬಾಬಾರವರು ತಮ್ಮ ಜೀವಿತ ಕಾಲದಲ್ಲಿ ಜನರಲ್ಲಿ ಏಕತೆಗೆ ಒತ್ತು ನೀಡಿದ್ದರು. ಆದರೆ ಶಂಕರಾಚಾರ್ಯರಂತಹ ಸ್ವಾಮಿಗಳು ಅವರ ಸಂದೇಶಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಇನ್ನೊಬ್ಬರು ಹೇಳಿದ್ದಾರೆ.

ಮತ್ತೊಬ್ಬ ಭಕ್ತರು ಮಾತನಾಡಿ, ಶಂಕರಾಚಾರ್ಯರ ಹೇಳಿಕೆ ಅಪಹಾಸ್ಯವಾಗಿದೆ. ಬರಗಾಲ ಗುಜರಾತ್, ಪಂಜಾಬ್, ಹರ್ಯಾಣ, ಮಧ್ಯ ಪ್ರದೇಶ ಮೊದಲಾದ ರಾಜ್ಯಗಳಲ್ಲೂ ಬಂದಿವೆ. ಹಾಗಾದರೆ ಅಲ್ಲಿನ ಬರಗಾಲಕ್ಕೆ ಏನು ಕಾರಣ ಎಂದು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com