
ನವದೆಹಲಿ: ರಾಷ್ಟ್ರೀಯವಾದದ ಬಗ್ಗೆ ನಡೆಯುತ್ತಿರುವ ಚರ್ಚೆಯ ಮುಂದುವರಿದ ಭಾಗವೆಂಬಂತೆ ದೆಹಲಿ ಲೆಫ್ಟಿನೆಂಟ್ ಗೌರ್ನರ್ ನಜೀಬ್ ಜಂಗ್ ಹೇಳಿಕೆ ನೀಡಿದ್ದು, ಭಾರತ್ ಮಾತಾ ಕಿ ಜೈ ಎಂಬ ಘೋಷಣೆ ಕೂಗುವುದು ತಮಗೆ ಹೆಮ್ಮೆಯ ವಿಚಾರ ಎಂದು ಹೇಳಿದ್ದಾರೆ.
ಅಲ್ಲಾ ಅಥವಾ ಯಾವುದೇ ದೇವರನ್ನು ಪೂಜಿಸುವುದು ಹಾಗೂ ದೇಶವನ್ನು ಪೂಜಿಸುವುದರ ನಡುವೆ ವ್ಯತ್ಯಾಸವಿದೆ. ಭಾರತ್ ಮಾತಾ ಕಿ ಜೈ ಎಂಬ ಘೋಷಣೆಯನ್ನು ಹೆಮ್ಮೆಯಿಂದ ಹೇಳುವುದಾಗಿ ನಜೀಬ್ ಜಂಗ್ ತಿಳಿಸಿದ್ದಾರೆ. ಇಂಡಿಯಾ ಟುಡೆ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ದೆಹಲಿ ಲೆಫ್ಟಿನೆಂಟ್ ಗೌರ್ನರ್ ಈ ಹೇಳಿಕೆ ನೀಡಿದ್ದಾರೆ. ಭಾರತ್ ಮಾತಾ ಕಿ ಜೈ ಘೋಷಣೆ ಹೇಳುವಂತೆ ಯಾರನ್ನೂ ಒತ್ತಾಯಿಸುವುದಕ್ಕೆ ಸಾಧ್ಯವಿಲ್ಲ. ಒಂದು ವೇಳೆ ಘೋಷಣೆ ಕೂಗದೇ ಇದ್ದರೆ ಅಂತವರನ್ನು ದೇಶವಿರೋಧಿಗಳು ಎಂದು ಹೇಳಲು ಸಾಧ್ಯವಿಲ್ಲ ಎಂದು ನಜೀಬ್ ಜಂಗ್ ತಿಳಿಸಿದ್ದಾರೆ.
ಇನ್ನು ಕನ್ಹಯ್ಯ ಕುಮಾರ್ ಬಗ್ಗೆಯೂ ಮಾತನಾಡಿರುವ ನಜೀಬ್ ಜಂಗ್, ಕನ್ಹಯ್ಯ ಕುಮಾರ್ ನನ್ನು ಪ್ರಶಂಸಿಸುವುದಿಲ್ಲ. ಜೆಎನ್ ಯು ವಿವಿ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Advertisement