ಸರ್ಕಾರಿ ಜಾಹೀರಾತು ಪರಿಶೀಲನೆಗೆ ತ್ರಿಸದಸ್ಯ ಸಮಿತಿ

ಕೇಂದ್ರ ಸರ್ಕಾರದ ಜಾಹೀರಾತುಗಳು ಸುಪ್ರೀಂ ಕೋರ್ಟ್‌ನ ನಿಯಮಗಳನ್ನು ಉಲ್ಲಂಘಿಸುತ್ತಿವೆಯೇ? ಎಂಬುದನ್ನು ಪರಿಶೀಲಿಸುವುದಕ್ಕಾಗಿ...
ಅಶೋಕ ಸ್ತಂಭ
ಅಶೋಕ ಸ್ತಂಭ
ನವದೆಹಲಿ: ಕೇಂದ್ರ ಸರ್ಕಾರದ ಜಾಹೀರಾತುಗಳು ಸುಪ್ರೀಂ ಕೋರ್ಟ್‌ನ ನಿಯಮಗಳನ್ನು ಉಲ್ಲಂಘಿಸುತ್ತಿವೆಯೇ? ಎಂಬುದನ್ನು ಪರಿಶೀಲಿಸುವುದಕ್ಕಾಗಿ ಕೇಂದ್ರ ಸರ್ಕಾರ ತ್ರಿಸದಸ್ಯ ಸಮಿತಿಯೊಂದನ್ನು ರೂಪಿಸಿದೆ. ಈ ಸಮಿತಿಯ ನೇತೃತ್ವವನ್ನು ಚುನಾವಣಾ ಆಯೋಗದ ಮಾಜಿ ಆಯುಕ್ತ ಬಿಬಿ ಟಂಡನ್ ವಹಿಸಲಿದ್ದಾರೆ.
ಟಂಡನ್ ನೇತೃತ್ವದ ಸಮಿತಿಯಲ್ಲಿ ಇಂಡಿಯಾ ಟಿವಿಯ ಮುಖ್ಯಸ್ಥ ರಜತ್ ಶರ್ಮಾ ಮತ್ತು ಒ ಗಿಲ್ವೀ ಆ್ಯಂಡ್ ಮಾಥೆರ್‌ನ ಎಕ್ಸಿಕ್ಯೂಟಿವ್ ಚೇರ್‌ಮೆನ್ ಪೀಯುಶ್ ಪಾಂಡೆ ಇದ್ದಾರೆ. 
2015 ಮೇ 13ರಂದು ಸುಪ್ರೀಂ ಕೋರ್ಟ್, ಸರ್ಕಾರಿ ಜಾಹೀರಾತುಗಳಲ್ಲಿ ರಾಷ್ಟ್ರಪತಿ,ಪ್ರಧಾನಿ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಚಿತ್ರಗಳನ್ನು ಬಳಸಬಹುದು ಎಂದು ಆದೇಶ ನೀಡಿತ್ತು. ಆದಾಗ್ಯೂ, ಇತ್ತೀಚೆಗೆ ಈ ಆದೇಶವನ್ನು ಮಾರ್ಪಾಡುಗೊಳಿಸಿದ್ದ ಕೋರ್ಟ್ ಇಂಥಾ ಜಾಹೀರಾತುಗಳಲ್ಲಿ ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ರಾಜ್ಯ ಸಚಿವರುಗಳು ಮತ್ತು ರಾಜ್ಯಪಾಲರ ಚಿತ್ರಗಳನ್ನೂ ಬಳಸುವುದಕ್ಕೆ ಅನುಮತಿ ನೀಡಿತ್ತು. 
ಈ ಸಮಿತಿಯು ಮಾಹಿತಿ ಹಾಗೂ ಪ್ರಸಾರ ಸಚಿವಾಲಯಕ್ಕೆ ಅಥವಾ ಇಲಾಖೆ ಕೈಗೊಳ್ಳಬೇಕಾದ ಸೂಕ್ತ ಕ್ರಮಗಳ ಬಗ್ಗೆ ಶಿಫಾರಸು ಮಾಡಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com