ಬರಪೀಡಿತ ಲಾತೂರ್‌ಗೆ ರೈಲು ಮೂಲಕ ಶುದ್ಧ ಜಲ

ಮಹಾರಾಷ್ಟ್ರದ ಬರ ಪೀಡಿತ ಪ್ರದೇಶವಾದ ಲಾತೂರ್‌ಗೆ ರೈಲು ಮೂಲಕ ಶುದ್ಧ ಜಲ ಪೂರೈಸಲಾಗಿದೆ. ಮಹಾರಾಷ್ಟ್ರದ ಮರಾಠ್‌ವಾಡಾ ಪ್ರದೇಶದಲ್ಲಿರುವ...
ನೀರು ಪೂರೈಸುವ ರೈಲು
ನೀರು ಪೂರೈಸುವ ರೈಲು
ಮುಂಬೈ: ಮಹಾರಾಷ್ಟ್ರದ ಬರ ಪೀಡಿತ ಪ್ರದೇಶವಾದ ಲಾತೂರ್‌ಗೆ  ರೈಲು ಮೂಲಕ ಶುದ್ಧ ಜಲ ಪೂರೈಸಲಾಗಿದೆ. 
ಮಹಾರಾಷ್ಟ್ರದ ಮರಾಠ್‌ವಾಡಾ ಪ್ರದೇಶದಲ್ಲಿರುವ ಲಾತೂರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಭೀಕರ ಬರಗಾಲದಿಂದ ಕಂಗೆಟ್ಟಿವೆ. ಈ ಬಾರಿ ಇಲ್ಲಿಗೆ 15 ದಿನಗಳಿಗೊಮ್ಮೆ ಮುನ್ಸಿಪಾಲಿಟಿ ನೀರು ಪೂರೈಕೆ ಮಾಡುತ್ತಿರುವುದಿಂದ ಜನರು ಕುಡಿಯುವ ನೀರಿಗೆ ಪರದಾಟ ಮಾಡುತ್ತಿದ್ದಾರೆ.
ಇದನ್ನು ಮನಗಂಡ ಮಹಾ ಸರ್ಕಾರ ಭಾರತೀಯ ರೈಲ್ವೆಯ ಸಹಯೋಗದೊಂದಿಗೆ ರೈಲಿನಲ್ಲಿ ನೀರು ಸಾಗಿಸುವ ಕಾರ್ಯವನ್ನು ಹಮ್ಮಿ ಕೊಂಡಿದೆ. ಮಂಗಳವಾರ ಬೆಳಗ್ಗೆ  5 ಲಕ್ಷ ಲೀಟರ್‌ನ್ನು ಹೊತ್ತ ರೈಲು ಲಾತೂರ್ ತಲುಪಿದೆ. 
ನೀರು ಹೊತ್ತು ತಂದ ವಾಟರ್ ಟ್ರೈನ್‌ನಲ್ಲಿ 10 ಟ್ಯಾಂಕರ್‌ಗಳಿದ್ದು, ಪ್ರತೀ ಟ್ಯಾಂಕರ್‌ನಲ್ಲಿ 50,000 ಲೀಟರ್ ನೀರು ಸರಬರಾಜು ಮಾಡಲಾಗುತ್ತದೆ.
ಪಶ್ಚಿಮ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮಿರಾಜ್ ನಿಂದ ಈ ಕುಡಿನೀರನ್ನು ಲಾತೂರ್‌ಗೆ ಸರಬರಾಜು ಮಾಡಲಾಗುತಿದ್ದು, ಪ್ರಸ್ತುತ ನಗರಕ್ಕೆ ಪ್ರತಿ ದಿನ  20 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ.
ಇನ್ನು ಮುಂದಿನ ರೈಲು ಏಪ್ರಿಲ್ 15 ಕ್ಕೆ ಲಾತೂರ್‌ಗೆ ನೀರು ಪೂರೈಸಲಿದೆ ಎಂದು ಅಧಿಕೃತರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com