2009ಕ್ಕೂ ಮುನ್ನ ಎಂ.ಫಿಲ್, ಪಿಎಚ್ ಡಿ ಪಡೆದವರಿಗೆ ಎನ್ ಇಟಿ ಕಡ್ಡಾಯವಲ್ಲ

2009ಕ್ಕಿಂತಲೂ ಮೊದಲು ಪಿಎಚ್ ಡಿ ಮತ್ತು ಎಂಫಿಲ್ ಪದವಿಗಳನ್ನು ಶೈಕ್ಷಣಿಕ ಅರ್ಹತೆಯಾಗಿ ಮಾನ್ಯ ಮಾಡಲು ಯುಜಿಸಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: 2009ಕ್ಕಿಂತಲೂ ಮೊದಲು ಪಿಎಚ್ ಡಿ ಮತ್ತು ಎಂಫಿಲ್ ಪದವಿಗಳನ್ನು ಶೈಕ್ಷಣಿಕ ಅರ್ಹತೆಯಾಗಿ ಮಾನ್ಯ ಮಾಡಲು ಯುಜಿಸಿ ನಿರ್ಧರಿಸಿದೆ. 
ಈ ಮೂಲಕ 2009ಕ್ಕಿಂತಲೂ ಮೊದಲು ಎಂ ಫಿಲ್ ಮತ್ತು ಪಿಎಚ್ ಡಿ ಪದವಿ ಪಡೆದವರಿಗೆ ಸ್ವಲ್ಪ ನಿರಾಳ ಸಿಕ್ಕಂತಾಗಿದೆ. 2009ಕ್ಕೂ ಮೊದಲ ಎಂಫಿಲ್ ಮತ್ತು ಪಿಎಚ್ ಡಿ ಪಡೆದವರಿಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ(ಎನ್ ಇಟಿ), ರಾಜ್ಯ ಸರ್ಕಾರಗಳು ನಡೆಸುವ ಅರ್ಹತಾ ಪರೀಕ್ಷೆ ಕಡ್ಡಾಯವಲ್ಲ. 
ಎನ್ ಇಟಿ ಸೇರಿದಂತೆ ರಾಜ್ಯ ಸರ್ಕಾರಗಳು ನಡೆಸುವ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದದಿದ್ದರೂ ವಿಶ್ವವಿದ್ಯಾಲಯಗಳ ಮತ್ತು ಪದವಿ ಕಾಲೇಜುಗಳ ಬೋಧಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. 
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಸ್ಮೃತಿ ಇರಾನಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ, ಎನ್ ಇಟಿ ಮತ್ತು ರಾಜ್ಯ ಸರ್ಕಾರಗಳು ನಡೆಸುವ ಪರೀಕ್ಷೆಗಳಿಂದ ವಿನಾಯಿತಿ ಪಡೆಯಲು ಷರತ್ತುಗಳನ್ನು ವಿಧಿಸಿದೆ. 
ಇನ್ನು ಸಭೆಯಲ್ಲಿ ಮಹಿಳೆಯರು ಮತ್ತು ಅಂಗವಿಕಲ ವಿದ್ಯಾರ್ಥಿಗಳಿಗೆ ಪಿಎಚ್ ಡಿ ಅಥವಾ ಎಂ ಫಿಲ್ ಪದವಿಯನ್ನು ಪೂರ್ಣಗೊಳಿಸಲು ನಿಗದಿ ಪಡಿಸಿರುವ ಅವಧಿಯನ್ನು ವಿಸ್ತರಿಸಲೂ ತೀರ್ಮಾನಕೈಗೊಳ್ಳಲಾಗಿದೆ. ಹೆರಿಗೆ ಮತ್ತು ಮಗುವಿನ ಪಾಲನೆಗಾಗಿ ಗರಿಷ್ಠ 240 ದಿನಗಳ ಕಾಲ ರಜೆ ತೆಗೆದುಕೊಳ್ಳಲು ಮಹಿಳೆಯರಿಗೆ ಅವಕಾಶ ಕಲ್ಪಿಸಿದೆ.
ಇನ್ನು ಪಿಎಚ್ ಡಿ, ಎಂಫಿಲ್ ಆಧಾರದ ಮೇಲೆ ವಿನಾಯಿತಿ ಪಡೆಯಲು, ಅಭ್ಯರ್ಥಿಗಳು ತಾವು ಮಾಡಿರುವ ಪಿಎಚ್ ಡಿ ಆಧಾರದಲ್ಲಿ ಕನಿಷ್ಠ 2 ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿರಬೇಕು. ಸಂಶೋಧನಾ ಪ್ರಂಬಂಧ ಆಧಾರದಲ್ಲಿ ಕನಿಷ್ಠ ಎರಡು ವಿಚಾರಣ ಸಂಕಿರಣಗಳಲ್ಲಿ ಅವರು ಪ್ರಬಂಧ ಮಂಡಿಸಿರಬೇಕು ಹಾಗೂ ಒಂದು ಪ್ರಬಂಧ ಪ್ರತಿಷ್ಠಿತ ನಿಯತಕಾಲಿಕದಲ್ಲಿ ಪ್ರಕಟವಾಗಿರಬೇಕು ಎಂದು ಷರತ್ತು ವಿಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com