

ಡೆಹ್ರಾಡೂನ್: ವಾರಾಣಾಸಿಯಲ್ಲಿ ಬಿಜೆಪಿಯ ಮುಖ್ಯಸ್ಥ ಕೇಶವ್ ಪ್ರಸಾದ್ ಮೌರ್ಯ ಕೃಷ್ಣ, ರಾಹುಲ್ ಗಾಂಧಿ, ಅಖಿಲೇಶ್ ಯಾದವ್, ಮಾಯಾವತಿ ಕೌರವರು ಎಂದು ಬಿಂಬಿಸಿದ್ದ ಪೋಸ್ಟರ್ ಕಾಣಿಸಿಕೊಂಡ ಮರುದಿನ ಉತ್ತರಾಖಂಡದಲ್ಲಿ ಅಮಿತ್ ಶಾ ಅವರ ವಿವಾದತ್ಮಕ ಪೋಸ್ಟರ್ ಕಾಣಿಸಿಕೊಂಡಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಮೂವರು ಶಾಸಕರ ಖರೀದಿಗೆ ಪ್ರಯತ್ನಿಸುತ್ತಿ ರುವ ಪೋಸ್ಟರ್ ನಗರದ ಪ್ರಮುಖ ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದು, ಉತ್ತರಾಖಂಡದಲ್ಲಿ ವಿವಾದದ ಕಿಡಿ ಹೊತ್ತಿಸಿದೆ. ಬಿಜೆಪಿಯನ್ನು ಗುರಿಯಾಗಿಸಿ ಕಾಂಗ್ರೆಸ್ ನಡೆಸಿರುವ ಕೀಳು ತಂತ್ರ ಇದು ಎಂದು ಬಿಜೆಪಿ ಆರೋಪಿಸಿದೆ.
ಈ ಪೋಸ್ಟರ್ ಗೂ ತನಗೂ ಯಾವುದೇ ಸಂಬಂಧ ಇಲ್ಲ ಎಂದು ಕಾಂಗ್ರೆಸ್ ಸಮರ್ಥನೆ ನೀಡಿದೆ. ಆದರೆ ಪೋಸ್ಟರ್‌ನಲ್ಲಿ ಅಭಿವ್ಯಕ್ತಿಗೊಂಡಿರುವ ವಿಚಾರ ಸಾಮಾನ್ಯ ಮನುಷ್ಯನ ಭಾವನೆಗಳನ್ನು ಪ್ರಕಟಿಸಿದೆ ಎಂದು ಅದು ಹೇಳಿದೆ.
ಪೋಸ್ಟರ್‌ನಲ್ಲಿ ಶಾ ಅವರು ಉತ್ತರಾಖಂಡ ಕಾಂಗ್ರೆಸ್‌ನ ಒಂಬತ್ತು ಬಂಡುಕೋರ ಶಾಸಕರ ಮುಖ ಹೊಂದಿರುವ ಒಂಬತ್ತು ಕುರಿಗಳನ್ನು ಹಗ್ಗದೊಂದಿಗೆ ಹಿಡಿದಿದ್ದು, ಹಣ ತುಂಬಿದ ಚೀಲ ಹೆಗಲಲ್ಲಿ ಇದೆ. ಬಿಜೆಪಿಗೆ ಮೂರು ಶಾಸಕರ ಅಗತ್ಯವಿದ್ದು ಖರೀದಿಸುವುದಾಗಿ ಶೀರ್ಷಿಕೆ ಕೂಡ ಹಾಕಿರುವುದು ಭಾರೀ ವಿವಾದ ಹುಟ್ಟು ಹಾಕಿದೆ.
Advertisement