ಕಿಕ್ಕಿರಿದ ಬಸ್ ಗೆ ವಿಮೆ ನಿರಾಕರಣೆ

ಬಸ್ ಗಳಲ್ಲಿ ಹೆಚ್ಚು ಜನರನ್ನು ತುಂಬಿಸುವವರಿಗೆ ಎಚ್ಚರಿಕೆ ಗಂಟೆ ಎಂಬಂತೆ ರಾಷ್ಟ್ರೀಯ ಗ್ರಾಹಕ ಆಯೋಗ ಬಸ್ ವೊಂದರ 13 ಲಕ್ಷ ರೂ ಮೌಲ್ಯದ ವಿಮೆ ಹಕ್ಕನ್ನು ತಿರಸ್ಕರಿಸಿದೆ.
ಕಿಕ್ಕಿರಿದ ಬಸ್ ಗೆ ವಿಮೆ ನಿರಾಕರಣೆ
ಕಿಕ್ಕಿರಿದ ಬಸ್ ಗೆ ವಿಮೆ ನಿರಾಕರಣೆ

ನವದೆಹಲಿ: ಬಸ್ ಗಳಲ್ಲಿ ಹೆಚ್ಚು ಜನರನ್ನು ತುಂಬಿಸುವವರಿಗೆ ಎಚ್ಚರಿಕೆ ಗಂಟೆ ಎಂಬಂತೆ ರಾಷ್ಟ್ರೀಯ ಗ್ರಾಹಕ ಆಯೋಗ ಬಸ್ ವೊಂದರ 13 ಲಕ್ಷ ರೂ ಮೌಲ್ಯದ ವಿಮೆ ಹಕ್ಕನ್ನು ತಿರಸ್ಕರಿಸಿದೆ.
2008 ರಲ್ಲಿ ನಡೆದ ಬಸ್ ಅಪಘಾತ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಜಿತ್ ಭಾರಿಹೋಕೆ, ರೇಖಾ ಗುಪ್ತಾ, ಬಸ್ ಗಳಲ್ಲಿ ಹೆಚ್ಚು ಜನರನ್ನು ತುಂಬುವುದರಿಂದ ಅಪಘಾತದ ಸಾಧ್ಯತೆ ಹೆಚ್ಚಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ದುಬೆ ಟ್ರಾವಲ್ಸ್ ನ ಬಸ್ ವೊಂದು 2008 ರಲ್ಲಿ ಅಪಘಾತಕ್ಕೀಡಾಗಿತ್ತು, ಈ ಅಪಘಾತದಲ್ಲಿ 8 ಪ್ರಯಾಣಿಕರು ಮೃತಪಟ್ಟಿದ್ದರು. ಆರ್ ಟಿ ಒ ನಿಯಮಗಳನ್ನು ಉಲ್ಲಂಘಿಸಿ 35 ಜನರ ಬದಲಿಗೆ 77 ಜನರನ್ನು ತುಂಬಿಸಿದ್ದ ಕಾರಣ ಬಸ್ ಗೆ ವಿಮೆ ಹಕ್ಕನ್ನು ನಿರಾಕರಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಜಿತ್ ಭಾರಿಹೋಕೆ, ರೇಖಾ ಗುಪ್ತಾ, ಬಸ್ ಗೆ ವಿಮೆಯ ಹಣವನ್ನು ನೀಡಲು ನಿರಕಾರಿಸಿದ್ದಾರೆ. ವಿಮೆ ಹಣವನ್ನು ನಿರಾಕರಿಸಿರುವುದಷ್ಟೇ ಅಲ್ಲದೇ ನಿಯಮ ಉಲ್ಲಂಘಿಸಿ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ದ ಕಾರಣ 50,000 ರೂ ದಂಡ ವಿಧಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com