
ಕೋಲ್ಕತಾ: ವಿಧಾನಸಭೆಗೆ ಮತದಾನ ನಡೆಯುತ್ತಿರುವ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ನ ನಾಯಕ ಅನುಬ್ರತಾ ಮೊಂಡಲ್ ವಿವಾದ ಉಂಟು ಮಾಡಿದ್ದಾರೆ.
ಏ.17 ರಂದು ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ಟಿಎಂಸಿ ನಾಯಕ ಅನುಬ್ರತಾ ಮೋಂಡಲ್ ಪಕ್ಷದ ಚಿನ್ಹೆ ಇರುವ ಉಡುಪನ್ನು ಧರಿಸಿ ಮತದಾನ ಮಾಡಿದ್ದಾರೆ. ಪಕ್ಷದ ಚಿನ್ಹೆ ಇರುವ ಉಡುಪನ್ನು ಧರಿಸಿ ಮತದಾನ ಮಾಡಿರುವ ಬಗ್ಗೆ ಚುನಾವಣಾ ಆಯೋಗ ವರದಿ ಕೇಳಿದೆ. ಚುನಾವಣಾ ಆಯೋಗ ವರದಿ ಕೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅನುಬ್ರತಾ, ತಮ್ಮ ತಪ್ಪಿಗೆ ಚುನಾವಣಾ ಅಧಿಕಾರಿಗಳನ್ನು ಹೊಣೆ ಮಾಡಿದ್ದಾರೆ. ನಮ್ಮ ಬಳಿ ಇರುವ ಎಲ್ಲಾ ಉಡುಪುಗಳ ಮೇಲೂ ತೃಣಮೂಲ ಕಾಂಗ್ರೆಸ್ ನ ಚಿನ್ಹೆ ಇದೆ. ನಾನು ಧರಿಸಿರುವ ಬಟ್ಟೆಯಲ್ಲಿ ಪಕ್ಷದ ಚಿಹ್ನೆ ಇದೆ ಎಂದು ತಿಳಿದಿದ್ದರೂ ಚುನಾವಣಾ ಅಧಿಕಾರಿಗಳೇಕೆ ಮತದಾನ ಮಾಡಲು ಅವಕಾಶ ನೀಡಿದರು ಎಂದು ಅನುಬ್ರತಾ ಮೋಂಡಲ್ ಪ್ರಶ್ನೆ ಮಾಡಿದ್ದಾರೆ.
Advertisement