ನ್ಯಾಷನಲ್ ಹೆರಾಲ್ಡ್ ಕೇಸ್: ಕಾಂಗ್ರೆಸ್ ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಸಚಿವಾಲಯಗಳಿಂದ ಪಡೆದ ದಾಖಲೆಗಳನ್ನು ಸಲ್ಲಿಸುವಂತೆ...
ಸೋನಿಯಾ, ರಾಹುಲ್
ಸೋನಿಯಾ, ರಾಹುಲ್
ನವದೆಹಲಿ: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಸಚಿವಾಲಯಗಳಿಂದ ಪಡೆದ ದಾಖಲೆಗಳನ್ನು ಸಲ್ಲಿಸುವಂತೆ ನೀಡಿದ್ದ ಸಮನ್ಸ್ ಪ್ರಶ್ನಿಸಿ ಕಾಂಗ್ರೆಸ್ ನಾಯಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ತೀರ್ಪನ್ನು ಕಾಯ್ದರಿಸಿದೆ.
ಕಳೆದ ತಿಂಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಹಾಗೂ ಅಸೋಸಿಯೆಟೆಟ್ ಜರ್ನಲ್ಸ್ ಪ್ರೈ, ಲಿ. ತನ್ನ ಬ್ಯಾಲನ್ಸ್ ಸೀಟ್ ಅನ್ನು ದೆಹಲಿ ಕೋರ್ಟ್‌ ಗೆ ಸಲ್ಲಿಸಿತ್ತು. ಕಳೆದ ತಿಂಗಳು 2010–11ನೇ ಸಾಲಿನ ತನ್ನ ಲೆಕ್ಕಪತ್ರಗಳನ್ನು ಸಲ್ಲಿಸುವಂತೆ ಕೋರ್ಟ್ ಸೂಚಿಸಿತ್ತು. 
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಹಾಗೂ ಅಸೋಸಿಯೆಟೆಡ್ ಜರ್ನಲ್ ತನ್ನ ಬ್ಯಾಲನ್ಸ್ ಶೀಟ್ ಸಲ್ಲಿಸಬೇಕು ಎಂದು ಬಿಜೆಪಿ ನಾಯಕ ಸುಬ್ರಮಣ್ಯನ್ ಸ್ವಾಮಿ ಅವರು ಸಲ್ಲಿಸಿದ್ದ ಅರ್ಜಿಗೆ ಕೋರ್ಟ್ ಅನುಮತಿ ನೀಡಿತ್ತು. 
ಅಸೋಸಿಯೆಟೆಡ್ ಜರ್ನಲ್ಸ್ ಗೆ ಕಾಂಗ್ರೆಸ್ 90.25 ಕೋಟಿ ರುಪಾಯಿ ಬಡ್ಡಿ ರಹಿತ ಸಾಲ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನ ಹಣಕಾಸಿನ ವ್ಯವಾಹರಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ನೀಡಬೇಕು ಎಂದು ಕೋರಿ ಸುಬ್ರಮಣ್ಯಯನ್ ಸ್ವಾಮಿ ಅವರು ಪಟಿಯಾಲ ಹೌಸ್ ಕೋರ್ಟ್ ಮನವಿ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com