ಲಾಹೋರ್ ಜೈಲಿನಲ್ಲಿ ಪಾಕಿಸ್ತಾನ ಕೈದಿಗಳು ಸಾಯಲ್ಲ ಏಕೆ: ಸರಬ್ಜಿತ್ ಸಹೋದರಿ ಪ್ರಶ್ನೆ

ಹನ್ನೊಂದು ಭಾರತೀಯ ಕೈದಿಗಳನ್ನು ಕೊಲ್ಲುವಂತೆ ಲಾಹೋರ್ ಜೈಲು ಆದೇಶ ನೀಡಿತ್ತು ಎಂದು ಸರಬ್ಜಿತ್ ಕೌರ್ ಸಹೋದರಿ ದಲ್ಬೀರ್ ಕೌರ್ ಆರೋಪಿಸಿದ್ದಾರೆ.
ದಲ್ಬೀರ್ ಕೌರ್
ದಲ್ಬೀರ್ ಕೌರ್
Updated on

ನವದೆಹಲಿ: ಹನ್ನೊಂದು ಭಾರತೀಯ ಕೈದಿಗಳನ್ನು ಕೊಲ್ಲುವಂತೆ ಲಾಹೋರ್ ಜೈಲು ಆದೇಶ ನೀಡಿತ್ತು ಎಂದು ಸರಬ್ಜಿತ್ ಕೌರ್ ಸಹೋದರಿ ದಲ್ಬೀರ್ ಕೌರ್ ಆರೋಪಿಸಿದ್ದಾರೆ.

ಇನ್ನು ಲಾಹೋರ್ ಜೈಲಿನಲ್ಲಿ ಏಕೆ ಯಾವಾಗಲು ಭಾರತೀಯ ಕೈದಿಗಳೇ ಸಾವನ್ನಪ್ಪುತ್ತಾರೆ, ಪಾಕಿಸ್ತಾನ ಕೈದಿಗಳು ಯಾಕೆ ಲಾಹೋರ್ ಜೈಲಿನಲ್ಲಿ ಸಾಯುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.  ಭಾರತೀಯ ಕೈದಿ ಕೃಪಾಲ್ ಸಿಂಗ್ ಲಾಹೋರ್ ಜೈಲಿನಲ್ಲಿ ಸಾವನ್ನಪ್ಪಿದ ನಂತರ ದಲ್ಬೀರ್ ಕೌರ್ ಈ ರೀತಿ ಪ್ರಶ್ನಿಸಿದ್ದಾರೆ.

ಇನ್ನು ಲಾಹೋರ್ ಜೈಲಿನಲ್ಲಿರುವ ಅಹಮದಾಬಾದ್ ನ ಕುಲ್ ದೀಪ್ ಕುಮಾರ್ ಮತ್ತು ಮಹಾರಾಷ್ಟ್ರದ ಅನ್ಸಾರಿ ಈ ಇಬ್ಬರು ಭಾರತೀಯ ಕೈದಿಗಳು ಅಪಾಯದಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಸರಬ್ಜಿತ್ ಸಿಂಗ್ 2013 ರಲ್ಲಿ ಜೈಲಿನ ಕೆಲ ಕೈದಿಗಳ ಮಾರಣಾಂತಿಕ ದಾಳಿಯಿಂದಾಗಿ ಸಾವನ್ನಪ್ಪಿದ್ದರು. ಇದಾದ  ನಂತರ 1992 ರಲ್ಲಿ ಬಂಧಿತನಾಗಿದ್ದ ಕೃಪಾಲ್ ಸಿಂಗ್ ಸೋಮವಾರ ನಿಗೂಢವಾಗಿ ಸಾವನ್ನಪ್ಪಿದ್ದಾರೆ,  ಕಪಾಲ್ ಸಿಂಗ್ ಹಾರ್ಟ್ ಆಟ್ಯಾಕ್ ನಿಂದ ಸತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com