ಹಂದ್ವಾರ ಮಾರ್ಕೆಟ್ ನಿಂದ ಭದ್ರತಾ ಪಡೆಯ ಮೂರು ಬಂಕರ್ ತೆರವು

ಜಮ್ಮು ಮತ್ತು ಕಾಶ್ಮೀರದ ಹಿಂಸಾಚಾರ ಪೀಡಿತ ಹಂದ್ವಾರ ನಗರದ ಮಾರ್ಕೆಟ್ ಸ್ಥಳದಲ್ಲಿದ್ದ ಭದ್ರತಾ ಪಡೆಯ ಮೂರು ಬಂಕರ್ ಗಳನ್ನು ನಗರಸಭೆ ಅಧಿಕಾರಿಗಳು...
ಹಂದ್ವಾರದಲ್ಲಿ ಭದ್ರತಾ ಸಿಬ್ಬಂದಿ
ಹಂದ್ವಾರದಲ್ಲಿ ಭದ್ರತಾ ಸಿಬ್ಬಂದಿ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಹಿಂಸಾಚಾರ ಪೀಡಿತ ಹಂದ್ವಾರ ನಗರದ ಮಾರ್ಕೆಟ್ ಸ್ಥಳದಲ್ಲಿದ್ದ ಭದ್ರತಾ ಪಡೆಯ ಮೂರು ಬಂಕರ್ ಗಳನ್ನು ನಗರಸಭೆ ಅಧಿಕಾರಿಗಳು ಮಂಗಳವಾರ ತೆರವುಗೊಳಿಸಿದ್ದಾರೆ. ಇದರಿಂದ ಸ್ಥಳೀಯ ನಿವಾಸಿಗಳ ಬಹುದಿನದ ಬೇಡಿಕೆ ಈಡೇರಿದಂತಾಗಿದೆ.
ಹಂದ್ವಾರದ ಮುಖ್ಯ ಮಾರುಕಟ್ಟೆಯಲ್ಲಿ ಅಂಗಡಿಗಳ ಮೇಲೆ ನಿರ್ಮಿಸಲಾಗಿದ್ದ ಮೂರು ಬಂಕರ್ ಗಳನ್ನು ನಗರಸಭೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಾರುಕಟ್ಟೆ ಸ್ಥಳದಲ್ಲಿದ್ದ ಮೂರು ಬಂಕರ್ ಗಳನ್ನು ತೆರವುಗೊಳಿಸಿರುವ ನಗರಸಭೆ ಅಧಿಕಾರಿಗಳು ಆ ಸ್ಥಳದಲ್ಲಿ ಸಾರ್ವಜನಿಕ ಉದ್ಯಾನವನಕ್ಕಾಗಿ ಮೀಸಲಿಟ್ಟ ಜಾಗ ಇದು ಎಂಬ ಬೋರ್ಡ್ ಅನ್ನು ಸಹ ಹಾಕಿದ್ದಾರೆ,
ಈ ಬಂಕರ್ ಗಳನ್ನು ತೆರವುಗೊಳಿಸಬೇಕು ಎಂದು ಸ್ಥಳೀಯರು ಹಲವು ದಿನಗಳಿಂದ ಒತ್ತಾಯಿಸುತ್ತಿದ್ದರು. ಆದರೆ ಸೇನೆ ಇದಕ್ಕೆ ನಿರಾಕರಿಸಿತ್ತು. ಕಳೆದ ವಾರ ಯೋಧನೊಬ್ಬ ಬಾಲಕಿಗೆ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಹಿಂಸಾತ್ಮಕ ಪ್ರತಿಭಟನೆ ನಡೆಸಿದ ನಂತರ ಬಂಕರ್ ತೆರವುಗೊಳಿಸಬೇಕು ಎಂಬ ಬೇಡಿಕೆ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com