ಐಎನ್ಎಸ್ ನಿರೀಕ್ಷಕ್
ದೇಶ
ಭಾರತೀಯ ಯುದ್ಧ ನೌಕೆಯಲ್ಲಿ ಸಿಲಿಂಡರ್ ಸ್ಫೋಟ: 3 ಗಾಯ
ಏಪ್ರಿಲ್ 16ರಂದು ಭಾರತೀಯ ನೌಕಾಪಡೆಯ ಯುದ್ದನೌಕೆ ಐಎನ್‌ಎಸ್ ನಿರೀಕ್ಷಕ್‌ನಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ...
ನವದೆಹಲಿ: ಏಪ್ರಿಲ್ 16ರಂದು ಭಾರತೀಯ ನೌಕಾಪಡೆಯ ಯುದ್ದನೌಕೆ ಐಎನ್‌ಎಸ್ ನಿರೀಕ್ಷಕ್‌ನಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ನಾವಿಕನೊರ್ವ ಕಾಲು ಕಳೆದುಕೊಂಡು ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ವಿಶಾಖಪಟ್ಟಣಂನಿಂದು ಮುಂಬೈಗೆ ಐಎನ್ಎಸ್ ನಿರೀಕ್ಷಕ್ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿತ್ತು.
ಮೂವರು ಗಾಯಾಳುಗಳಿಗೂ ತ್ರಿವೆಂಡ್ರಂನ ಮಿಲಿಟರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಮುಂಬೈಗೆ ಕರೆದೊಯ್ಯಲಾಗುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ