ದೂರದರ್ಶನಕ್ಕೆ ವಿಷಯಗಳ ಹೊರಗುತ್ತಿಗೆ: ರಾಜ್ಯ ವರ್ಧನ್ ಸಿಂಗ್ ರಾಥೋಡ್

ಕಲೆ ಮತ್ತು ಮನರಂಜನೆಗೆ ಹೆಚ್ಚು ಪ್ರೋತ್ಸಾಹ ನೀಡಲು ವಿಷಯಗಳನ್ನು ದೂರದರ್ಶನಕ್ಕೆ ಹೊರಗುತ್ತಿಗೆ ನೀಡಲು...
ರಾಜ್ಯವರ್ಧನ್ ಸಿಂಗ್ ರಾಥೋಡ್
ರಾಜ್ಯವರ್ಧನ್ ಸಿಂಗ್ ರಾಥೋಡ್

ನವದೆಹಲಿ: ಕಲೆ ಮತ್ತು ಮನರಂಜನೆಗೆ ಹೆಚ್ಚು ಪ್ರೋತ್ಸಾಹ ನೀಡಲು ವಿಷಯಗಳನ್ನು ದೂರದರ್ಶನಕ್ಕೆ ಹೊರಗುತ್ತಿಗೆ ನೀಡಲು ಸರ್ಕಾರ ಪರಿಶೀಲಿಸುತ್ತಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ತಿಳಿಸಿದ್ದಾರೆ.

ಸಾಕ್ಷ್ಯಚಿತ್ರಗಳನ್ನು ತೋರಿಸಲು ಮತ್ತು ವಿದೇಶಿ ಚಲನಚಿತ್ರೋತ್ಸವಗಳಲ್ಲಿ ಸ್ಪರ್ಧಿಸಲು ಭಾರತೀಯ ಸಿನಿಮಾಗಳಿಗೆ ಹಣ ಒದಗಿಸಲು ಸರ್ಕಾರದ ದೂರದರ್ಶನ ಚಾನೆಲ್ ಗೆ ವಿಷಯಗಳನ್ನು ಗುತ್ತಿಗೆ ನೀಡುವ ಬಗ್ಗೆ ಯೋಜನೆಯಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೇಳಿದರು.

ಚಾನೆಲ್ ಗಳಲ್ಲಿ ತೋರಿಸುವ ಕಾರ್ಯಕ್ರಮದಲ್ಲಿ, ಸಿನಿಮಾ, ಡಾಕ್ಯುಮೆಂಟರಿಗಳಲ್ಲಿ ಉತ್ತಮ ವಿಷಯವಿರಬೇಕೆಂದು ಜನರಿಂದ ಭಾರೀ ಬೇಡಿಕೆ ಕೇಳಿಬರುತ್ತಿದೆ. ಅದಕ್ಕಾಗಿ ಮನರಂಜನಾ ಉದ್ಯಮಗಳು ಕೌಶಲ್ಯಾಭಿವೃದ್ಧಿಯಲ್ಲಿ ಹೂಡಿಕೆ ಮಾಡಬೇಕಾಗಿದೆ ಎಂದರು.

ಮೇಕ್ ಇನ್ ಇಂಡಿಯಾ ಟ್ರೆಂಡ್ ಬೆಳವಣಿಗೆಗೆ ಸರ್ಕಾರ ಅನೇಕ ಕ್ರಮ ಕೈಗೊಳ್ಳುತ್ತಿದೆ. ಮಹಾರಾಷ್ಟ್ರದಲ್ಲಿ ಆನಿಮೇಷನ್ ಮತ್ತು ಗೇಮ್ ಸೆಂಟರ್ ಗಳನ್ನು ತೆರೆಯಲಾಗುವುದು.
ವಿದೇಶಗಳಲ್ಲಿ ಚಿತ್ರ ತಯಾರಿಸಲು ವೀಸಾ ಪಡೆಯುವ ಪ್ರಕ್ರಿಯೆಯನ್ನು ಸುಗಮಗೊಳಿಸಲಾಗುವುದು. ಚಿತ್ರ ತಯಾರಿ ಉಪಕರಣಗಳ ಮೇಲಿನ ತೆರಿಗೆ ದರವನ್ನು ಇಳಿಸಲಾಗುವುದು. ಭಾರತದಲ್ಲಿ 857 ಟೆಲಿವಿಷನ್ ಚಾನೆಲ್ ಗಳಿದ್ದು, 168 ದಶಲಕ್ಷ ಜನರಿಗೆ ಟಿವಿ ತಲುಪಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com