
ಉಜ್ಜಯಿನಿ: ಒಂದು ತಿಂಗಳ ಕಾಲ ನಡೆಯಲಿರುವ ಸಿಂಹಸ್ಥ ಕುಂಭ ಮೇಳ ಏ.22 ರಂದು ಉಜ್ಜಯಿನಿಯಲ್ಲಿ ಪ್ರಾರಂಭವಾಗಿದ್ದು ಸಾವಿರಾರು ಜನರು ಕ್ಷಿಪ್ರಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.
ಪ್ರತಿ 12 ವರ್ಷಗಳಿಗೊಮ್ಮೆ 12 ಜ್ಯೋತಿರ್ಲಿಂಗವಿರುವ ಕ್ಷೇತ್ರಗಳಲ್ಲಿ ಒಂದಾದ ಉಜ್ಜಯಿನಿಯಲ್ಲಿ ಕುಂಭ ಮೇಳ ನಡೆಯುತ್ತದೆ. 13 ಅಖಾಡಗಳ ಸಾಧು - ಸಂತರು ಸಿಂಹಸ್ಥ ಕುಂಭಮೇಳದಲ್ಲಿ ಭಾಗವಹಿಸುವುದು ಕುಂಭ ಮೇಳದ ಪ್ರಮುಖ ಆಕರ್ಷಣೆಯಾಗಿದ್ದು ಜುನಾ ಅಖಾಡಾದ ಸಾಧು-ಸಂತರ ಪವಿತ್ರ ಸ್ನಾನದೊಂದಿಗೆ ಈ ಬಾರಿಯ ಕುಂಭಮೇಳ ಪ್ರಾರಂಭವಾಗಿದೆ.
ಕುಂಭಮೇಳದಲ್ಲಿ ಸಾಧು-ಸಂತರೂ ಸೇರಿ ದೇಶದ ವಿವಿಧ ಭಾಗಗಳಿಂದ ಸುಮಾರು 5 ಕೋಟಿ ಜನರು ಭಾಗವಹಿಸುವ ನಿರೀಕ್ಷೆ ಇದ್ದು ಮಧ್ಯಪ್ರದೇಶದಲ್ಲಿರುವ ವಿವಿಧ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆಯಲ್ಲಿ ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯದ ಬಳಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
Advertisement