ದೇಶವಿರೋಧಿಗಳನ್ನು ಶಿಕ್ಷಿಸಲು ಕಾನೂನು ರೂಪಿಸಿ: ಪ್ರಧಾನಿ ಮೋದಿಗೆ ಎಸ್ ಪಿ ನಾಯಕನ ಒತ್ತಾಯ

ದೇಶವಿರೋಧಿಗಳನ್ನು ಶಿಕ್ಷಿಸಲು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಕಾನೂನು ರೂಪಿಸಬೇಕೆಂದು ಉತ್ತರ ಪ್ರದೇಶದ ಮಾಜಿ ಸಚಿವ, ಸಮಾಜವಾದಿ ಪಕ್ಷದ ಮುಖಂಡ ಆಶು ಮಲೀಕ್ ಒತ್ತಾಯಿಸಿದ್ದಾರೆ.
ಸಮಾಜವಾದಿ ಪಕ್ಷದ ಮುಖಂಡ ಆಶು ಮಲೀಕ್
ಸಮಾಜವಾದಿ ಪಕ್ಷದ ಮುಖಂಡ ಆಶು ಮಲೀಕ್

ಮಥುರಾ: ದೇಶವಿರೋಧಿಗಳನ್ನು ಶಿಕ್ಷಿಸಲು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಕಾನೂನು ರೂಪಿಸಬೇಕೆಂದು ಉತ್ತರ ಪ್ರದೇಶದ ಮಾಜಿ ಸಚಿವ, ಸಮಾಜವಾದಿ ಪಕ್ಷದ ಮುಖಂಡ ಆಶು ಮಲೀಕ್ ಒತ್ತಾಯಿಸಿದ್ದಾರೆ.
ದೇಶವಿರೋಧಿ ಚಟುವಟಿಕೆಯಲ್ಲಿ ತೊಡಗಿರುವವರು ಯಾವೂದೇ ಧರ್ಮ, ಜಾತಿಯವರಾಗಿದ್ದರೂ ಅವರನ್ನು ಶಿಕ್ಷಿಸುವ ಕಾನೂನು ಜಾರಿಯಾಗಬೇಕು, ಕೇಂದ್ರ ಸರ್ಕಾರ ಶಾಸನದ ಮೂಲಕ ಇಂಥದ್ದೊಂದು ಕಾನೂನನ್ನು ಜಾರಿಗೊಳಿಸಬೇಕೆಂದು ಆಶು ಮಲೀಕ್ ಹೇಳಿದ್ದಾರೆ.
ಇನ್ನು ದಾರುಲ್ ಉಲೂಂ ದಿಯೊಬಂದ್ ಸಂಘಟನೆ ಬಗ್ಗೆ ಮಾತನಾಡಿರುವ ಮಲೀಕ್, ಬಿಜೆಪಿ ನಾಯಕರು ಸಂಘಟನೆ ವಿರುದ್ಧ ಆರೋಪ ಮಾಡುವ ಮೊದಲು, ದಾರುಲ್ ಉಲೂಂ ದಿಯೋಬಂದ್ ನಡೆಸುತ್ತಿರುವ ಧಾರ್ಮಿಕ ಶಾಲೆಯ ಚಟುವಟಿಕೆಗಳನ್ನು ವೀಕ್ಷಿಸಲಿ ಎಂದು ಹೇಳಿದ್ದಾರೆ.
ದಾರುಲ್ ಉಲೂಂ ದಿಯೋಬಂದ್ ನಡೆಸುತ್ತಿರುವ ಧಾರ್ಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬ್ರಾತೃತ್ವ, ದೇಶಭಕ್ತಿಯ ಪಾಠ ಮಾಡಲಾಗುತ್ತದೆ. ದಿಯೋಬಂದ್ ನ ಬಗ್ಗೆ  ಮಾತನಾಡುವವರು ಅದು ಮೌಲಾನಾ ಮಹ್ಮುದುಲ್ ಹಸನ್ ಅವರ ಧಾರ್ಮಿಕ ಭೂಮಿ, ಅಲ್ಲಿ ಸ್ವಾತಂತ್ರ್ಯ ಚಳುವಳಿಯ ವೇಳೆ ಜನರು ಪ್ರಾಣತ್ಯಾಗ ಮಾಡಿದ್ದಾರೆಂಬುದನ್ನು ಗಮನದಲ್ಲಿಟ್ಟುಕೊಂಡು ಮಾತನಾಡಲಿ ಎಂದು ಹೇಳಿದ್ದಾರೆ. 
ಭಾರತ ಮಾತಾ ಕಿ ಜೈ ಘೋಷಣೆ ಕೂಗುವುದರ ವಿರುದ್ಧ ಫತ್ವಾ ಹೊರಡಿಸಿದ್ದಕ್ಕಾಗಿ ಆರ್ ಎಸ್ ಎಸ್ ಹಾಗೂ ಬಿಜೆಪಿ ದಾರುಲ್ ಉಲೂಂ ದಿಯೋಬಂದ್ ಸಂಘಟನೆ ವಿರುದ್ಧ ವಾಗ್ದಾಳಿ ನಡೆಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com