2014ರಲ್ಲಿ ಮಹಾರಾಷ್ಟ್ರ ನವ್‌ನಿರ್ಮಾಣ ಸೇನೆ ತೊರೆದು ಶಿವಸೇನೆ ಸೇರಿದ್ದ ಹಾಜಿ ಅರಾಫತ್ ಶೇಖ್, ತೃಪ್ತಿ ದೇಸಾಯಿ ಅವರ ತೀರ್ಮಾನದ ಬಗ್ಗೆ ಗುಡುಗಿದ್ದಾರೆ. ಒಂದು ವೇಳೆ ಭೂಮಾತಾ ರಣ್‌ರಾಗಿನಿ ಬ್ರಿಗೇಡ್ ನಾಯಕಿ ತೃಪ್ತಿ ದೇಸಾಯಿ ಹಾಜಿ ಅಲಿ ದರ್ಗಾಗೆ ಪ್ರವೇಶಿಸಲು ಯತ್ನಿಸಿದರೆ ಆಕೆಗ ಚಪ್ಪಲಿಯೇಟು ಬೀಳುತ್ತದೆ ಎಂದು ಶೇಖ್ ಹೇಳಿದ್ದಾರೆ.