ಬರಪೀಡಿತ ಒಡಿಸಾದ ಬಾವಿಗಳಲ್ಲಿ ಕೆಂಪು ಎಣ್ಣೆ ಮಿಶ್ರಿತ ನೀರು: ಜನರಲ್ಲಿ ಹೆಚ್ಚುತ್ತಿದೆ ಕಿಡ್ನಿ ಸಮಸ್ಯೆ

ಎಲ್ಲೆಡೆ ಉಂಟಾಗಿರುವಂತೆ ಬರಪೀಡಿತ ಒಡಿಸ್ಸಾದಲ್ಲೂ ಕೂಡ ನೀರಿಗೆ ಹಾಹಾಕಾರ ಉಂಟಾಗಿದೆ. ಒಡಿಸ್ಸಾದ ನರಸಿಂಗಪುರದಲ್ಲಿ ಬಾವಿಯ ಎಣ್ಣೆ ಮಿಶ್ರಿತ ಕೆಂಪು ನೀರು ಬರುತ್ತಿದೆ....
ಕೊಳವೆ ಬಾವಿಗಳಿಂದ ನೀರು ಸಂಗ್ರಹಿಸುತ್ತಿರುವ ಒಡಿಸಾ ಜನ
ಕೊಳವೆ ಬಾವಿಗಳಿಂದ ನೀರು ಸಂಗ್ರಹಿಸುತ್ತಿರುವ ಒಡಿಸಾ ಜನ

ಪುಲ್ಪಾಡ: ಎಲ್ಲೆಡೆ ಉಂಟಾಗಿರುವಂತೆ ಬರಪೀಡಿತ ಒಡಿಸ್ಸಾದಲ್ಲೂ ಕೂಡ ನೀರಿಗೆ ಹಾಹಾಕಾರ ಉಂಟಾಗಿದೆ. ಒಡಿಸ್ಸಾದ ನರಸಿಂಗಪುರದಲ್ಲಿ ಬಾವಿಯ ಎಣ್ಣೆ ಮಿಶ್ರಿತ ಕೆಂಪು ನೀರು ಬರುತ್ತಿದೆ.

ಈ ನೀರು ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲಿ, ಆದರೆ ಬೇರೆ ದಾರಿಯಿಲ್ಲದ ಜನ ಈ ನೀರನ್ನೇ ಕುಡಿದು ಹಲವು ಕಾಯಿಲೆಗಳನ್ನು ಆಹ್ವಾನಿಸಿಕೊಳ್ಳುತ್ತಿದ್ದಾರೆ.

ಈತನ ಹೆಸರು ರಬೀಂದ್ರಾ ಬೆಹ್ರಾ, ನರಸಿಂಗಪುರ್ ನ ಪುಲ್ಪಾಡ ಗ್ರಾಮದವರು. ಕೀಲುಗಳು ಮತ್ತು ಪಕ್ಕೆಲುಬುಗಳು ಊದಿಕೊಂಡು ದೆವ್ವದ ರೀತಿ ಕಾಣಿಸುತ್ತಿದ್ದಾರೆ. ಇವರು ಗ್ರಾಮದಲ್ಲಿ ಸಿಗುವ ಕೆಂಪು ಬಣ್ಣ ಮಿಶ್ರಿತ ಎಣ್ಣೆ ನೀರನ್ನು ಕುಡಿದು ಕ್ರೋನಿಕ್ ಕಿಡ್ನಿ ಡಿಸೀಸ್ ಎಂಬ ಕಾಯಿಲೆಗೆ ಒಳಗಾಗಿದ್ದಾರೆ.

ಈ ಕಾಯಿಲೆಗೆ ಚಿಕಿತ್ಸೆಗೆ ಹೆಚ್ಚಿನ ಹಣದ ಅವಶ್ಯಕತೆಯಿತ್ತು. ಹೀಗಾಗಿ ತಾನು ಸಾಕಿದ್ದ ಹಸು, ತನ್ನ ಪಾಲಿನ ಭೂಮಿ ಎಲ್ಲವನ್ನು ಮಾರಿ ಚಿಕಿತ್ಸೆ ಪಡೆದಿದ್ದಾನೆ. ಆದರೂ ಕಾಯಿಲೆ ಗುಣವಾಗಿಲ್ಲ. ಹೆಚ್ಚಿನ ಚಿಕಿತ್ಸೆಗಾಗಿ ತನ್ನ ಮನೆಯ ಅರ್ಧ ಭಾಗವನ್ನು ಮಾರಿ ಚಿಕಿತ್ಸೆ ಪಡೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ತನ್ನ ಕಾಯಿಲೆಯ ಚಿಕಿತ್ಸೆಗಾಗಿ ಎಲ್ಲಾ ಹವನ್ನು ಕಳೆದು ಕೊಂಡ ಬೆಹ್ರಾ ಜೀವನಕ್ಕೆ ಕೇವಲ ಸರ್ಕಾರ ಹಿರಿಯ ನಾಗರಿಕರಿಗೆ ನೀಡುವ ಪಿಂಚಣಿ ಮಾತ್ರ ಆಧಾರವಾಗಿದೆ. ಹೀಗಾಗಿ ತನಗೂ ಹಿರಿಯ ನಾಗರಿಕರಿಗೆ ನೀಡುವ ಪಿಂಚಣಿ ಸೇವೆಯ ಅನುಕೂಲ ಮಾಡಿಕೊಡಬೇಕೆಂದು ಬೆಹ್ರಾ ಪತ್ನಿ ಕೇಳಿದ್ದಾಳೆ.

ನೀರಿನಿಂದ ಬರುವ ಈ ರೋಗಕ್ಕೆ ಇದುವರೆಗೂ 288 ಜನ ಸಾವಿಗೀಡಾಗಿದ್ದಾರೆ,  ಸುಮಾರು 882 ಮಂದಿ ಈ ರೋಗದಿಂದ ಬಳಲುತ್ತಿದ್ದಾರೆ. ಸ್ಥಳೀಯ ಎನ್ ಜಿ ಒ ಸಂಸ್ಥೆಯೊಂದು ಇವರ ಸಹಾಯಕ್ಕೆ ಧಾವಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com