
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಸುಳ್ಳು ಹೇಳುವವರೆಂದು ಆರೋಪಿಸಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸೋದರ ಸಂಬಂಧಿ ಕರುಣಾ ಶುಕ್ಲಾ ಆರ್ ಎಸ್ ಎಸ್ ನಿಂದ ತಮಗೂ ಆಜಾದಿ ಬೇಕು ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣೆ ಗೆಲ್ಲಲು ನರೇಂದ್ರ ಮೋದಿ ಸುಳ್ಳು ಭರವಸೆಗಳನ್ನು ನೀಡಿದ್ದಾರೆ. ನಾನು ಹಲವು ಚುನಾವಣೆಗಳನ್ನು, ಸರ್ಕಾರ ರಚನೆಯನ್ನು ನೋಡಿದ್ದೇನೆ ಆದರೆ ಒಬ್ಬ ವ್ಯಕ್ತಿ(ಮೋದಿ) ಕೇವಲ ಸುಳ್ಳುಗಳಿಂದಲೇ ಚುನಾವಣೆ ಗೆದ್ದಿರುವುದನ್ನು ನೋಡಿರುವುದು ಇದೇ ಮೊದಲು ಎಂದು ಕರುಣಾ ಶುಕ್ಲಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆರ್ ಎಸ್ಎಸ್ ಹಾಗೂ ಹಿಂದೂ ಸಂಘಟನೆಗಳ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿರುವ ಕರುಣಾ ಶುಕ್ಲಾ, ಕನ್ಹಯ್ಯ ಕುಮಾರ್ ಮಾದರಿಯಲ್ಲೇ ತಮಗೂ ಆರ್ ಎಸ್ ಎಸ್ ನಿಂದ ಆಜಾದಿ ಬೇಕು ಎಂದು ಹೇಳಿದ್ದಾರೆ. 2014 ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕರುಣಾ ಶುಕ್ಲಾ ಕಾಂಗ್ರೆಸ್ ಸೇರ್ಪಡೆಗೊಂಡು ಛತ್ತೀಸ್ ಗಢದ ಬಿಲಾಸ್ ಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
Advertisement