2 ವರ್ಷದ ಕಂದಮ್ಮಗಳ ಕೈಗೆ ಟ್ಯಾಬ್ಲೆಟ್ ಕೊಟ್ಟ ಶಾಲೆ: ಪೋಷಕರಿಗೆ ಪೀಕಲಾಟ

ಹೈದರಾಬಾದ್‌ನ ಶಾಲೆಗಳು ಎರಡು ವರ್ಷ ಮಕ್ಕಳಿಗೆ ಕಲಿಸಲು ಟ್ಯಾಬ್ಲೆಟ್‌ಗಳನ್ನು ಬಳಸಲು ಅರಂಭಿಸಿರುವುದು ಪೋಷಕರಲ್ಲಿ ಇನ್ನಿಲ್ಲದ ಆತಂಕ ಸೃಷ್ಟಿ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೈದರಾಬಾದ್‌ : ಹೈದರಾಬಾದ್‌ನ ಶಾಲೆಗಳು ಎರಡು ವರ್ಷ ಮಕ್ಕಳಿಗೆ  ಕಲಿಸಲು ಟ್ಯಾಬ್ಲೆಟ್‌ಗಳನ್ನು ಬಳಸಲು ಅರಂಭಿಸಿರುವುದು ಪೋಷಕರಲ್ಲಿ ಇನ್ನಿಲ್ಲದ ಆತಂಕ ಸೃಷ್ಟಿ ಮಾಡಿದೆ.

ತೆಲಂಗಾಣದ ರಾಜಧಾನಿಯಲ್ಲಿನ ಕೆಲವು ಶಾಲೆಗಳು ಈಗಾಗಲೇ ಎರಡು ವರ್ಷದ ಮಕ್ಕಳಿಗೆ ಕಲಿಸಲು ಟ್ಯಾಬ್‌ಲೆಟ್‌ಗಳನ್ನು ಬಳಸಲು ಆರಂಭಿಸಿವೆ. ಇತರ ಶಾಲೆಗಳು ಈ ವಿಷಯದಲ್ಲಿ ನಾ ಮುಂದು ತಾ ಮುಂದು ಎಂಬಂತೆ ಟ್ಯಾಬ್‌ಲೆಟ್‌ಗಳನ್ನು ಬಳಸುವ ಆತುರದಲ್ಲಿವೆ.

ಎರಡು ವರ್ಷದ ಮಕ್ಕಳ ದೃಷ್ಟಿ ತುಂಬಾ ಸೂಕ್ಷ್ಮವಿರುವುದರಿಂದ ಟ್ಯಾಬ್‌ಲೆಟ್‌ನಂತಹ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಬಳಸುವುದು ಸರಿಯಲ್ಲ, ಮೇಲಾಗಿ ಅಂತಹ ಉಪಕರಣಗಳನ್ನು ಬಳಸುವುದಕ್ಕೆ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಪ್ರೀ ಸ್ಕೂಲ್‌ ಸಮೂಹಗಳು ಈಗಾಗಲೇ ಪೋಷಕರಿಗೆ ಟ್ಯಾಬ್‌ಲೆಟ್‌ ಖರೀದಿಸುವುದನ್ನು ಕಡ್ಡಾಯ ಮಾಡಿವೆ ಎಂದು ವರದಿಗಳು ಹೇಳಿವೆ. ವಿಶೇಷವೆಂದರೆ ತಮ್ಮ ಶಾಲೆಗಳಲ್ಲಿ ಲಭ್ಯವಿರುವ ಟ್ಯಾಬ್‌ಲೆಟ್‌ಗಳನ್ನು ಮಾತ್ರವೇ ಖರೀದಿಸುವಂತೆ ಅವು ಮಕ್ಕಳ ಹೆತ್ತವರಿಗೆ ತಾಕೀತು ಮಾಡುತ್ತಿವೆ.

ತಮ್ಮಲ್ಲಿ ದೊರಕುತ್ತಿರುವ ಟ್ಯಾಬ್‌ಲೆಟ್‌ಗಳು ಶಿಶುಸ್ನೇಹಿಯಾಗಿವೆ ಎಂದು ಹೇಳಿಕೊಳ್ಳುತ್ತಿರುವ ಶಾಲೆಗಳು ಈ ಟ್ಯಾಬ್‌ಲೆಟ್‌ಗಳನ್ನು ಮಕ್ಕಳ ಶೈಕ್ಷಣಿಕ ಉದ್ದೇಶಕ್ಕೆ ಮಾತ್ರವೇ ಬಳಸಲಾಗುತ್ತದೆ ಎಂದು ಹೇಳಿವೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com