ಭಾರತದ ಕೆಲ ರಾಜಕಾರಣಿಗಳೊಂದಿಗೆ ದಾವೂದ್ ಸಂಪರ್ಕ: ಕಾಲ್ ರೆಕಾರ್ಡ್ ನಿಂದ ಬಹಿರಂಗ

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿದ್ದುಕೊಂಡು ಮಹಾರಾಷ್ಟ್ರದ ಕೆಲವು ಪ್ರಮುಖ ರಾಜಕಾರಣಿಗಳು ವ್ಯಕ್ತಿಗಳೊಂದಿಗೆ ನಿರಂತರವಾಗಿ ...
ದಾವೂದ್ ಇಬ್ರಾಹಿಂ
ದಾವೂದ್ ಇಬ್ರಾಹಿಂ
Updated on

ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿದ್ದುಕೊಂಡು ಮಹಾರಾಷ್ಟ್ರದ ಕೆಲವು ಪ್ರಮುಖ ರಾಜಕಾರಣಿಗಳು ವ್ಯಕ್ತಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾನೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ದಾವೂದ್ ಇಬ್ರಾಹಿಂ ಮಹಾರಾಷ್ಟ್ರದ ರಾಜಕಾರಣಿಗಳೊಂದಿಗೆ ನಿರಂತರವಾಗಿ ಸಂಪಕದಲ್ಲಿದ್ದಾನೆ ಎಂಬುದು ಕರಾಚಿಯಲ್ಲಿರುವ ಆತನ ಮನೆಯ ಫೋನ್​ಗಳ ಕರೆಗಳ ಮಾಹಿತಿಯಿಂದ ತಿಳಿದು ಬಂದಿದೆ.

ಜತೆಗೆ ದಾವೂದ್ ಕುಟುಂಬಸ್ಥರು ಸಹ ಭಾರತದಲ್ಲಿರುವ ಪ್ರಮುಖರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ ಎಂದು ಗುಜರಾತ್​ನ ವಡೋದರಾ ಮೂಲದ ಹ್ಯಾಕರ್ ಮನೀಷ್ ಭಾಂಗ್ಲೆ ಮತ್ತು ಅವರ ಸ್ನೇಹಿತ ಜಯೇಶ್ ಶಾ ತಿಳಿಸಿದ್ದಾರೆ. ಇವರಿಬ್ಬರೂ ಪಾಕಿಸ್ತಾನ ಟೆಲಿಕಾಂ ಕಂಪನಿಯ ವೆಬ್​ಸೈಟ್ ಹ್ಯಾಕ್ ಮಾಡಿ ಈ ಮಾಹಿತಿಯನ್ನು ಪಡೆದಿದ್ದಾರೆ.

ಕರಾಚಿಯಲ್ಲಿರುವ ದಾವೂದ್ ಮನೆಗೆ 4 ದೂರವಾಣಿ ಸಂಪರ್ಕ ಪಡೆಯಲಾಗಿದೆ. ಎಲ್ಲಾ ಸಂಪರ್ಕಗಳನ್ನೂ ದಾವೂದ್ ಮಡದಿ ಮೆಹಜಬೀನ್ ಶೇಖ್ ಹೆಸರಿನಲ್ಲಿ ಪಡೆಯಲಾಗಿದೆ.

021-3587**19, -021-3587**39, -021-3587**99, -021-3587**99. ಇದನ್ನೂ ಭಾರತದ ಗುಪ್ತಚರ ಸಂಸ್ಥೆಯ ಹಿರಿಯ ಅಧಿಕಾರಿಗಳೂ ಸಹ ದೃಢಪಡಿಸಿದ್ದಾರೆ.

ಈ ಸಂಖ್ಯೆಗಳಿಂದ ಭಾರತದಲ್ಲಿರುವ ದೂರವಾಣಿ ಸಂಖ್ಯೆಗಳಿಗೆ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್​ನಲ್ಲಿರುವ 4 ನಂಬರ್​ಗಳಿಗೆ ಸತತವಾಗಿ ಕರೆ ಮಾಡಲಾಗಿದೆ ಎಂದು ವರದಿ ಮಾಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com