ಸುಬ್ರಮಣಿಯನ್ ಸ್ವಾಮಿಗೆ ಸಂಸತ್ ಹಾಗೂ ಬೀದಿಯಲ್ಲಿ ಬಳಸುವ ಪದಗಳ ವ್ಯತ್ಯಾಸ ಗೊತ್ತಿಲ್ಲ: ಕಾಂಗ್ರೆಸ್

ಗುರುವಾರ ನಡೆದ ಸಂಸತ್ ಅಧಿವೇಶನ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯ ಸುಬ್ರಮಣಿಯನ್ ಸ್ವಾಮಿ ನಡುವಣಾ ವಾಕ್ಸಮರಕ್ಕೆ ಕಾರಣವಾಯಿತು....
ಸುಬ್ರಮಣಿಯನ್ ಸ್ವಾಮಿ
ಸುಬ್ರಮಣಿಯನ್ ಸ್ವಾಮಿ
Updated on: 

ನವದಹೆಲಿ: ಗುರುವಾರ ನಡೆದ ಸಂಸತ್ ಅಧಿವೇಶನ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯ  ಸುಬ್ರಮಣಿಯನ್ ಸ್ವಾಮಿ ನಡುವಣಾ ವಾಕ್ಸಮರಕ್ಕೆ ಕಾರಣವಾಯಿತು.

ಬಿಜೆಪಿಯಿಂದ ರಾಜ್ಯಸಭೆಗೆ ಹೊಸದಾಗಿ ನಾಮ ನಿರ್ದೇಶನಗೊಂಡಿರುವ ಸುಬ್ರಮಣಿಯನ್ ಸ್ವಾಮಿ  ಕಲಾಪದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡರು ಪ್ರತಿಭಟನೆ ಕೂಗಿದರು. ಆಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಖರೀದಿ ಸಂಬಂಧ ಮಾತನಾಡಿದ ಸುಬ್ರಮಣಿಯನ್ ಸ್ವಾಮಿ  ಕಾಂಗ್ರೆಸ್ ನವರಿಗೆ ಗೊತ್ತಿರುವುದು ಒಂದೇ ಅದು ಇಟಲಿ ಸಂವಿಧಾನ ಎಂದು ಛೇಡಿಸಿದರು.

ಸ್ವಾಮಿ ಅವರ ಈ ಪದ ಪ್ರಯೋಗಕ್ಕೆ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತ ಪಡಿಸಿದರು. ಅನಗತ್ಯವಾಗಿ ಕಾಂಗ್ರೆಸ್ ನಾಯಕರನ್ನು ಕೆರಳಿಸುತ್ತಿದ್ದೀರಿ ಸುಮ್ಮನೆ ಕುಳಿತುಕೊಳ್ಳಿ ಎಂದು ರಾಜ್ಯ ಸಭೆ ಉಪಾಧ್ಯಕ್ಷ ಕುರಿಯನ್ ಹೇಳಿದರು.

ಈ ಮನುಷ್ಯನಿಗೆ ರಸ್ತೆ ಹಾಗೂ ಸಂಸತ್ತಿನಲ್ಲಿ ಯಾವ ರೀತಿಯ ಪದ ಬಳಕೆ ಮಾಡಬೇಕು ಎಂಬುದರ ಬಗ್ಗೆ ಅರಿವಿಲ್ಲ, ಬೀದಿಯಲ್ಲಿ ಬಳಸಿದ ಪದಗಳನ್ನು ಸಂಸತ್ತಿನಲ್ಲು ಬಳಸುತ್ತಾರೆ ಎಂದು ಕಾಂಗ್ರೆಸ್ ನಾಯಕರ ಗುಲಾಂ ನಬಿ ಆಜಾದ್ ಆರೋಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com