ಪರೀಕ್ಷಾ ಕೇಂದ್ರದಲ್ಲೇ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ!

ಪರೀಕ್ಷೆ ಬರೆಯುತ್ತಿದ್ದ ವೇಳೆ ವಿದ್ಯಾರ್ಥಿನಿಗೆಹೆರಿಗೆ ನೋವು ಕಾಣಿಸಿಕೊಂಡು ಪರೀಕ್ಷಾ ಕೇಂದ್ರದಲ್ಲೇ ಮಗುವಿನೆ ಜನ್ಮ ನೀಡಿರುವ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗಿರಿಧ್:  ಪರೀಕ್ಷೆ ಬರೆಯುತ್ತಿದ್ದ ವೇಳೆ ವಿದ್ಯಾರ್ಥಿನಿಗೆಹೆರಿಗೆ ನೋವು ಕಾಣಿಸಿಕೊಂಡು ಪರೀಕ್ಷಾ ಕೇಂದ್ರದಲ್ಲೇ ಮಗುವಿನೆ ಜನ್ಮ ನೀಡಿರುವ ಘಟನೆ ಜಾರ್ಖಂಡ್ ನ ಗಿರಿಧ್ ನಲ್ಲಿ ನಡೆದಿದೆ.

 ಬಿಎ ಅಂತಿಮ ವರ್ಷದ ಪರೀಕ್ಷೆ ಬರೆಯುತ್ತಿದ್ದ ಭಾರತಿ ಕುಮಾರಿ ಪರೀಕ್ಷಾ ಕೊಠಡಿಯಲ್ಲೆ ಮಗುವಿಗೆ ಜನ್ಮ ನೀಡುವ ಮೂಲಕ ತಾಯಿಯಾಗಿದ್ದಾಳೆ.

ಜಾರ್ಖಂಡ್ ರಾಜ್ಯದ ಗಿರಿಧ್ ಜಿಲ್ಲೆಯ 21 ವರ್ಷದ ಭಾರತಿ ಗರ್ಭಿಣಿಯಾಗಿದ್ದಳು. ಆದ್ದರಿಂದ ಪರೀಕ್ಷೆಗೆ ಎರಡು ಗಂಟೆ ಮೊದಲೇ ಆಟೋದಲ್ಲಿ ತೆರಳಿದ್ದಾಳೆ. ಕಡಿದಾದ ರಸ್ತೆಯಲ್ಲಿನ ಪ್ರಯಾಣ ತುಂಬಾ ಆಯಾಸವನ್ನುಂಟು ಮಾಡಿತ್ತು. ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪರೀಕ್ಷಾ ಕೊಠಡಿ ಸೇರಿದ ಭಾರತಿ, ಅರ್ಧ ಗಂಟೆ ಪರೀಕ್ಷೆ ಬರೆದಿದ್ದಾಳೆ.

ಈ ಸಂದರ್ಭದಲ್ಲಿ ನೋವು ಕಾಣಿಸಿಕೊಂಡ ಪರಿಣಾಮ ಕಾಲೇಜಿನ ಅಧಿಕಾರಿಗಳು ವೈದ್ಯಕೀಯ ತಂಡಕ್ಕೆ ಪೋನ್ ಮಾಡಿ ಕರೆಸಿದ್ದಾರೆ. ಆದರೆ ಅದಾಗಲೇ ಕುಮಾರಿ ಮಗುವಿಗೆ ಜನ್ಮ ನೀಡಿ ತಾಯಿಯಾಗಿದ್ದಳು.
ನಂತರ ಇಬ್ಬರನ್ನು ಸ್ಥಳೀಯ ನರ್ಸಿಂಗ್ ಹೋಮ್ ಗೆ ದಾಖಲಿಸಲಾಯಿತು. ತಾಯಿ ಹಾಗೂ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com