ಹಾಜಿ ಅಲಿ ದರ್ಗಾ ಪ್ರವೇಶ ವಿವಾದ: ತೃಪ್ತಿ ದೇಸಾಯಿ ಕ್ರಮವನ್ನು ಖಂಡಿಸಿದ ಮಹಿಳಾ ಖಾಜಿ

ತೃಪ್ತಿ ದೇಸಾಯಿ ಕ್ರಮವನ್ನು ಖಂಡಿಸಿರುವ ಉತ್ತರ ಪ್ರದೇಶದ ಪ್ರಥಮ ಮಹಿಳಾ ಖಾಜಿ ಬಲವಂತವಾಗಿ ಯಾವುದೇ ಧಾಮಿಕ ಕೇಂದ್ರಗಳನ್ನು ಪ್ರವೇಶಿಸಬಾರದು ಎಂದು ಹೇಳಿದ್ದಾರೆ.
ಮಹಿಳಾ ಖಾಜಿ ಜಹಿರ್‌ ನಖ್ವಿ
ಮಹಿಳಾ ಖಾಜಿ ಜಹಿರ್‌ ನಖ್ವಿ

ಲಖನೌ: ಮಹಿಳೆಯರಿಗೆ ಪ್ರವೇಶ ಇಲ್ಲದ ಧಾರ್ಮಿಕ ಕೇಂದ್ರಗಳಿಗೆ ಬಲವಂತವಾಗಿ ಪ್ರವೇಶಿಸಲು ಯತ್ನಿಸಿರುವ ಭೂಮಾತಾ ಬ್ರಿಗೇಡ್ ನ ಅಧ್ಯಕ್ಷೆ ತೃಪ್ತಿ ದೇಸಾಯಿ ಕ್ರಮವನ್ನು ಖಂಡಿಸಿರುವ ಉತ್ತರ ಪ್ರದೇಶದ ಪ್ರಥಮ ಮಹಿಳಾ ಖಾಜಿ ಜಹಿರ್‌ ನಖ್ವಿ, ಬಲವಂತವಾಗಿ ಯಾವುದೇ ಧಾಮಿಕ ಕೇಂದ್ರಗಳನ್ನು ಪ್ರವೇಶಿಸಬಾರದು ಎಂದು ಹೇಳಿದ್ದಾರೆ.

ತೃಪ್ತಿ ದೇಸಾಯಿಗೆ ಹಾಜಿ ಅಲಿ ದರ್ಗಾ ಪ್ರವೇಶಕ್ಕೆ ಅನುಮತಿ ನಿರಾಕರಿಸಿದ್ದಾರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಖಾಜಿ, ಈ ರೀತಿಯ ಪ್ರಯತ್ನಗಳು ಕೋಮು ಗಲಭೆಗೆ ಕಾರಣವಾಗಲಿದೆ ಎಂದು ಎಚ್ಚರಿಸಿದ್ದಾರೆ. ಬಲವಂತವಾಗಿ ದೇವಸ್ಥಾನ- ಮಸೀದಿಗಳನ್ನು ಪ್ರವೇಶಿಸುವುದು ತಪ್ಪು ಇಂತಹ ಘಟನೆಗಳನ್ನು ಉತ್ತೇಜಿಸಬಾರದು ಎಂದು ಖಾಜಿ ತಿಳಿಸಿದ್ದಾರೆ. ಮಹಿಳೆಯರಿಗೆ ನಿಷೇಧವಿರುವ ಮಸೀದಿ ಹಾಗೂ ದೇವಾಲಯಗಳಲ್ಲಿ ಪ್ರವೇಶಕ್ಕಾಗಿ ಆಗ್ರಹಿಸಿ ಅಭಿಯಾನ ಕೈಗೊಂಡಿರುವ ಭೂಮಾತಾ ಬ್ರಿಗೇಡ್, ಹಾಜಿ ಅಲಿ ದರ್ಗಾ ಪ್ರವೇಶಿಸಲು ಯತ್ನಿಸಿದ್ದರು. ಆದರೆ ಅವರನ್ನು ತಡೆಹಿಡಿಯಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com