
ವಾಷಿಂಗ್ಟನ್: ಅಮೆರಿಕ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ ಜೂ.8ರಂದು ಸಂಸತ್ ಉದ್ದೇಶಿಸಿ ಭಾಷಣ ಮಾಡಲು ಅಮೆರಿಕಾ ಸ್ಪೀಕರ್ ಪಾಲ್ ರ್ಯಾನ್ ಆಹ್ವಾನ ನೀಡಿದ್ದಾರೆ.
ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಿಯ ಅನುಭವಗಳು ಅಮೆರಿಕದ ಸಂಸದರಿಗೆ ಸ್ಪೂರ್ತಿ ತುಂಬಲಿದೆ ಎಂದು ರ್ಯಾನ್ ಹೇಳಿದ್ದಾರೆ.
ಈ ಮೊದಲು 2005 ಜುಲೈ 19 ರಂದು ಅಂದಿನ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್, ಸೆಪ್ಟಂಬರ್ 14, 2000ದಂದು ಅಟಲ್ ಬಿಹಾರಿ ವಾಜಪೇಯಿ, 1994 ಮೇ 18 ರಂದು ಪಿ.ವಿ ನರಸಿಂಹ ರಾವ್, 1985 ನೇ ಜುಲೈ 13 ರಂದು ರಾಜೀವ್ ಗಾಂಧಿ ಅಮೆರಿಕಾ ಸಂಸತ್ ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿಗಳಾಗಿದ್ದಾರೆ.
2005ರ ಜೂನ್ ನಂತರ ಯಾವ ದೇಶದ ಪ್ರಧಾನಿಗೂ ಅಮೆರಿಕ ಸಂಸತ್ ಉದ್ದೇಶಿಸಿ ಮಾತನಾಡುವ ಅವಕಾಶ ಸಿಕ್ಕಿರಲಿಲ್ಲ. ಅಮೆರಿಕ ಹಾಗೂ ಭಾರತ ಶೃಂಗದಲ್ಲಿ ಭಾಗವಹಿಸಲು ಮೋದಿ ಜೂನ್ 7 ರಂದು ಅಮೆರಿಕ ಪ್ರವಾಸ ಕೈಗೊಳ್ಳಲಿದ್ದು ಅಮೆರಿಕಾ ಸಂಸತ್ತಿನಲ್ಲಿ ಭಾಷಣ ಮಾಡಲಿದ್ದಾರೆ.
Advertisement