ಶ್ರೀಶಾಂತ್
ಶ್ರೀಶಾಂತ್

ಮಾಜಿ ಕ್ರಿಕೆಟಿಗ ಶ್ರೀಶಾಂತ್ ಬಳಿ ಇರುವ ಆಸ್ತಿ 7.37 ಕೋಟಿ

ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಅಭ್ಯರ್ಥಿ ಎಸ್.ಶ್ರೀಶಾಂತ್ ಅವರು ತಾವು 7.37 ಕೋಟಿ ರುಪಾಯಿ ಮೌಲ್ಯದ ಆಸ್ತಿ ಹೊಂದಿರುವುದಾಗಿ...
ತಿರುವನಂತಪುರಂ: ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಅಭ್ಯರ್ಥಿ ಎಸ್.ಶ್ರೀಶಾಂತ್ ಅವರು ತಾವು 7.37 ಕೋಟಿ ರುಪಾಯಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಶುಕ್ರವಾರ ಘೋಷಿಸಿಕೊಂಡಿದ್ದಾರೆ.
ಬಿಜೆಪಿಯಿಂದ ಕೇರಳ ವಿಧಾನಸಭೆ ಚುನಾವಣೆ ಸ್ಪರ್ಧಿಸಿರುವ ಶ್ರೀಶಾಂತ್ ತಮ್ಮ ಆಸ್ತಿಯ ವಿವರವನ್ನು ಇಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದು, ತಮ್ಮ ಬಳಿ 42, 500 ರುಪಾಯಿ ಹಾಗೂ ಪತ್ನಿ ಬಳಿ 35 ಸಾವಿರ ರುಪಾಯಿ ನಗದು ಹೊಂದಿರುವುದಾಗಿ ನಾಮಪತ್ರದ ಜೊತೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ತಿಳಿಸಿದ್ದಾರೆ.
1.18 ಕೋಟಿ ರುಪಾಯಿ ಮೌಲ್ಯದ ಒಂದು ಜಾಗ್ವರ್ ಕಾರು, 30 ಸಾವಿರ ರು.ಮೌಲ್ಯದ ಒಂದು ಬೈಕ್ ಹಾಗೂ 5.5 ಕೋಟಿ ಬೆಲೆ ಬಾಳುವ ಮನೆ ಮತ್ತು ಕೊಚ್ಚಿಯಲ್ಲಿ 5.2 ಎಕರೆ ಜಮೀನು ಹೊಂದಿರುವುದಾಗಿ ಮಾಜಿ ಕ್ರಿಕೆಟಿಗ ಘೋಷಿಸಿಕೊಂಡಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com