ಸಾಂದರ್ಭಿಕ ಚಿತ್ರ
ದೇಶ
ಗೆಸ್ಟ್ ಹೌಸ್ ನಲ್ಲಿ ಉಳಿದುಕೊಂಡಿದ್ದ ರಷ್ಯಾ ಮಹಿಳೆ ಮೇಲೆ ಮಾಲೀಕನಿಂದಲೇ ಅತ್ಯಾಚಾರ
ಗೋವಾ ಪ್ರವಾಸಕ್ಕೆ ಬಂದು ಅತಿಥಿ ಗೃಹದಲ್ಲಿ ಉಳಿದುಕೊಂಡಿದ್ದ ರಶಿಯನ್ ಮಹಿಳೆಯ ಮೇಲೆ ಮಾಲೀಕನೇ ಅತ್ಯಾಚಾರ ನಡೆಸಿರುವ ಘಟನೆ ಪಣಜಿಯಲ್ಲಿ ನಡೆದಿದೆ...
ಪಣಜಿ: ಗೋವಾ ಪ್ರವಾಸಕ್ಕೆ ಬಂದು ಅತಿಥಿ ಗೃಹದಲ್ಲಿ ಉಳಿದುಕೊಂಡಿದ್ದ ರಶಿಯನ್ ಮಹಿಳೆಯ ಮೇಲೆ ಮಾಲೀಕನೇ ಅತ್ಯಾಚಾರ ನಡೆಸಿರುವ ಘಟನೆ ಪಣಜಿಯಲ್ಲಿ ನಡೆದಿದೆ.
ಶುಕ್ರವಾರ ಬೆಳಗ್ಗೆ ಈ ದುರ್ಘಟನೆ ನಡೆದಿದೆ. 25 ವರ್ಷದ ಯುವತಿ ಕೋಣೆಯಲ್ಲಿ ಮಲಗಿ ನಿದ್ರಿಸುತ್ತಿದ್ದಾಗ ಅಲ್ಲಿಗೆ ಬಂದ ಮಾಲೀಕ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸ್ ಇನ್ಸಪೆಕ್ಟರ್ ಸಂಜಯ್ ದಲ್ವಿ ತಿಳಿಸಿದ್ದಾರೆ.
ಆರೋಪಿಯನ್ನು ಜೇಮ್ಸ್ ಡಿಸೋಜಾ ಎಂದು ಗುರುತಿಸಲಾಗಿದ್ದು ಆತ ಮೊರ್ಜಿಮ್ ಕ್ಲಬ್ ಅತಿಥಿ ಗೃಹದ ಮಾಲೀಕನಾಗಿದ್ದಾನೆ. ಘಟನೆಯ ಬಳಿಕ ಆತ ತಲೆ ಮರೆಸಿಕೊಂಡಿದ್ದು ಆತನಿಗಾಗಿ ಶೋಧವನ್ನು ಆರಂಭಿಸಲಾಗಿದೆ.
ಸಂತ್ರಸ್ತೆಗೆ ವೈದ್ಯಕೀಯ ಪರೀಕ್ಷೆಯನ್ನು ಮಾಡಲಾಗಿದ್ದು ಅತ್ಯಾಚಾರ ನಡೆಸಿರುವುದು ಸಾಬೀತಾಗಿದೆ. ಮುಂದಿನ ವಾರ ಮಹಿಳೆ ವಾಪಸ್ ಸ್ವದೇಶಕ್ಕೆ ತೆರಳಬೇಕಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ