ನೇತಾಜಿ ಕಣ್ಮರೆ ಪ್ರಕರಣ: ತನಿಖಾ ಸಮಿತಿ ವರದಿಯನ್ನು ಸ್ವೀಕರಿಸಲು ಮೊರಾರ್ಜಿ ನಿರಾಕರಿಸಿದ್ದರು!

1945 ಆಗಸ್ಟ್‌ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಸಾವಿಗೀಡಾಗಿದ್ದರು ಎಂದು ಹೇಳಿದ ಎರಡು ತನಿಖಾ ವರದಿಗಳನ್ನು...
ನೇತಾಜಿ ಸುಭಾಷ್ ಚಂದ್ರ ಬೋಸ್
ನೇತಾಜಿ ಸುಭಾಷ್ ಚಂದ್ರ ಬೋಸ್
ನವದೆಹಲಿ: 1945 ಆಗಸ್ಟ್‌ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಸಾವಿಗೀಡಾಗಿದ್ದರು ಎಂದು ಹೇಳಿದ ಎರಡು ತನಿಖಾ ವರದಿಗಳನ್ನು ಸ್ವೀಕರಿಸಲು ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ನಿರಾಕರಿಸಿದ್ದರು. ಶುಕ್ರವಾರ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ನೇತಾಜಿಗೆ ಸಂಬಂಧಪಟ್ಟ ಕಡತಗಳಲ್ಲಿ ಈ ವಿಷಯ ಬಹಿರಂಗವಾಗಿದೆ.
ಮೊರಾರ್ಜಿ ಅವರು ನೇತಾಜಿ ಕಣ್ಮರೆ ಬಗ್ಗೆ ಮತ್ತೊಮ್ಮೆ ತನಿಖೆ ನಡೆಸುವಂತೆ ಆದೇಶಿಸಿದ್ದರು.
1991 ಫೆಬ್ರವರಿ 26 ರಂದು ಮಾಜಿ ಸಂಸದ ಸಮರ್ ಗುಹಾ ಅವರು ಸಂಸದ ದಂಡವತೆ ಅವರಿಗೆ ಬರೆದ ಪತ್ರದಲ್ಲಿ,  1978 ಸೆಪ್ಟಂಬರ್‌ನಲ್ಲಿ ಮೊರಾರ್ಜಿ ದೇಸಾಯಿಯವರು ಲೋಕಸಭೆಯಲ್ಲೊಂದು ಹೇಳಿಕೆ ನೀಡಿದ್ದರು. ಆಗಸ್ಟ್ 18, 1945ರಲ್ಲಿ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಕಣ್ಮರೆ ಪ್ರಕರಣದ ಬಗ್ಗೆ ನವಾಜ್ ಕಮಿಟಿ ಮತ್ತು ಖೋಸ್ಲಾ ಆಯೋಗ ನಡೆಸಿದ ತನಿಖಾ ವರದಿಯನ್ನು ತಿರಸ್ಕರಿಸಲಾಗಿದೆ ಎಂಬುದು ಆ ಹೇಳಿಕೆಯಾಗಿತ್ತು. 
ಅಷ್ಟೇ ಅಲ್ಲದೆ, ಮೊರಾರ್ಜಿ ದೇಸಾಯಿ ಅವರು ಈ ಪ್ರಕರಣದ ಬಗ್ಗೆ ಹೊಸತಾಗಿ ತನಿಖೆ ಮಾಡುವಂತೆ ಆದೇಶಿಸಿದ್ದರು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. 
ನೇತಾಜಿ ಸುಭಾಷ್ ಚಂದ್ರ ಬೋಸ್ ಕಣ್ಮರೆ ಬಗ್ಗೆ ಸಾರ್ವಜನಿಕ ತನಿಖೆ ನಡೆಸುವ ಬದಲು ತಜ್ಞರಿಂದಲೇ ತನಿಖೆ ನಡೆಸಬೇಕೆಂದು ಗುಹಾ ಅವರಲ್ಲಿ ಮೊರಾರ್ಜಿ ಹೇಳಿದ್ದರು. ಅದರ ಜತೆಗೇ ಬೋಸ್ ಕಣ್ಮರೆ ಬಗ್ಗೆ ಇರುವ ರಹಸ್ಯ ಮಾಹಿತಿಗಳನ್ನು ಪತ್ತೆ ಹಚ್ಚಲು ಆಗಿನ ಪ್ರಧಾನಿಯಾದಿದ್ದ ಚಂದ್ರಶೇಖರ್ ಅವರು ತಜ್ಞರ ಸಮಿತಿಯನ್ನು ರೂಪಿಸಬೇಕು ಎಂದು ಹೇಳಿರುವುದಾಗಿ ಪತ್ರದಲ್ಲಿ ಉಲ್ಲೇಖವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com