ದೆಹಲಿ ಪೊಲೀಸರ, ಡಿಜೆಬಿ ಡೀಸೆಲ್ ವಾಹನ ನೋಂದಣಿಗೆ ಸುಪ್ರೀಂ ಅಸ್ತು

ವಿಚಾರಣಾಧೀನ ಕೈದಿಗಳನ್ನು ಹಾಗೂ ಶಸ್ತ್ರಾಸ್ತ್ರಗಳನ್ನು ಮತ್ತು ನೀರು ಸರಬರಾಜು ಮಾಡುವುದಕ್ಕಾಗಿ ದೆಹಲಿ ಪೊಲೀಸರಿಗೆ ಹಾಗೂ ದೆಹಲಿ ಜಲ...
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
ನವದೆಹಲಿ: ವಿಚಾರಣಾಧೀನ ಕೈದಿಗಳನ್ನು ಹಾಗೂ ಶಸ್ತ್ರಾಸ್ತ್ರಗಳನ್ನು ಮತ್ತು ನೀರು ಸರಬರಾಜು ಮಾಡುವುದಕ್ಕಾಗಿ ದೆಹಲಿ ಪೊಲೀಸರಿಗೆ ಹಾಗೂ ದೆಹಲಿ ಜಲ ಮಂಡಳಿ(ಡಿಜೆಬಿ)ಗೆ ನೂತನ ಡೀಸೆಲ್ ವಾಹನಗಳ ನೋಂದಣಿ ಮಾಡಲು ಶನಿವಾರ ಸುಪ್ರೀಂಕೋರ್ಟ್ ಅನುಮತಿ ನೀಡಿದೆ.
ಮರ್ಸಿಡಿಸ್, ಟಯೋಟ, ಮಹೀಂದ್ರಾ ಮತ್ತು ಜನರಲ್ ಮೋಟಾರ್ಸ್​ನಂತಹ ಪ್ರತಿಷ್ಠಿತ ಕಂಪೆನಿಗಳ ಅರ್ಜಿ ಸೇರಿದಂತೆ ಡೀಸೆಲ್ ಬಳಕೆ ಕಾರುಗಳಿಂದ ಆಗುವ ಮಾಲಿನ್ಯ ಕುರಿತ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಟಿ.ಎಸ್,ಥಾಕೂರ್ ನೇತೃತ್ವದ ತ್ರಿಸದಸ್ಯ ಪೀಠ, ಗ್ರೀನ್ ಸೆಸ್ ಪಾವತಿಸಿಕೊಂಡು 2000 ಸಿಸಿಯ 190 ಡೀಸೆಲ್ ವಾಹನ ಖರೀದಿಸಲು ಒಪ್ಪಿಗೆ ನೀಡಿದೆ. ಅಲ್ಲದೆ ದೆಹಲಿ ಜಲಮಂಡಳಿಗೆ ಗ್ರೀನ್ ಸೆಸ್ ಪಾವತಿಯಿಂದ ವಿನಾಯ್ತಿ ನೀಡಿದೆ.
ಇನ್ನು ಮರ್ಸಿಡಿಸ್, ಟಯೋಟ, ಮಹೀಂದ್ರಾ ಮತ್ತು ಜನರಲ್ ಮೋಟಾರ್ಸ್​ನಂತಹ ಪ್ರತಿಷ್ಠಿತ ಕಂಪೆನಿಗಳು 2000 ಸಿಸಿ ಸಾಮರ್ಥ್ಯದ ಅತಿ ಹೆಚ್ಚು ಬೆಲೆಯ ಡೀಸೆಲ್ ಕಾರುಗಳಿಗೆ ದೆಹಲಿಯಲ್ಲಿ ನೋಂದಣಿ ಮಾಡಲು ಅವಕಾಶ ನೀಡುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ.
ಡೀಸೆಲ್ ಕಾರುಗಳ ನೋಂದಣಿ ನಿಷೇಧಿಸಿ ಕೋರ್ಟ್ ನೀಡಿದ್ದ ಮಧ್ಯಂತರ ತೀರ್ಪು ಏ. 30 ರ ವರೆಗೆ ಜಾರಿಯಲ್ಲಿದ್ದ ಕಾರಣ ಇಂದು ಮತ್ತೆ ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್ ಡೀಸೆಲ್ ವಾಹನಗಳ ಮೇಲಿನ ನಿಷೇಧವನ್ನು ಮುಂದುವೆರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com