ಅಮರಾವತಿ: ರೈತರ ಆತ್ಮಹತ್ಯೆಗೆ ಪ್ರಸಿದ್ಧವಾಗಿರುವ ಮಹಾರಾಷ್ಟ್ರದ ಅಮರಾವತಿಯಲ್ಲಿ ಅಪ್ಪಾರೆಲ್ ಪಾರ್ಕ್ ನಿರ್ಮಾಣ ಮಾಡಲಾಗುವುದೆಂದು ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ವಿದರ್ಭದಲ್ಲಿರುವ ಅಮರಾವತಿ ನಗರದಲ್ಲಿ ಹೆಸಚಿನ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಇದನ್ನು ಜವಳಿ ನಗರವನ್ನಾಗಿ ಮಾಡಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. " ರೈತರ ಅತ್ಮಹೆತ್ಯೆ ಹೆಚ್ಚುತ್ತಿರುವ ವಿದರ್ಭದಲ್ಲಿ ಜವಳಿ ಕೈಗಾರಿಕೆಗಳನ್ನು ಉತ್ತೇಜಿಸಲಿದೆ ಇದಕ್ಕಾಗಿ ಅಪ್ಪಾರೆಲ್ ಪಾರ್ಕ್ ನಿರ್ಮಾಣ ಮಾಡಲಿದೆ ಎಂದು ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ.
ನಂದ್ ಗೌನ್ ಕೈಗಾರಿಕಾ ಎಸ್ಟೇಟ್ ನ್ನು ಟೆಕ್ಸ್ ಟೈಲ್ ಪಾರ್ಕ್ ನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಹಾಗೂ ಶೀಘ್ರವೇ ಅಮರಾವತಿ ಜವಳಿ ನಗರವೆಂಬ ಖ್ಯಾತಿ ಪಡೆಯಲಿದೆ ಎಂದು ಹೇಳಿರುವ ದೇವೇಂದ್ರ ಫಡ್ನವೀಸ್ ಇನ್ನು ಕಬ್ಬು ಬೆಳೆಗಾರರಿಗೂ ಆತ್ಮಹತ್ಯೆ ಮಾಡಿಕೊಳ್ಳದಂತೆ ಕರೆ ನೀಡಿದ್ದಾರೆ.
Advertisement