
ನವದೆಹಲಿ: ರಿಯಲ್ ಎಸ್ಟೇಟ್ ಕಾಯ್ದೆ 2016 ಭಾನುವಾರದಿಂದ(ಮೇ 1) ಜಾರಿಗೆ ಬರುತ್ತಿದೆ. ಭಾರತದಲ್ಲಿ ರಿಯಲ್ ಎಸ್ಟೇಟ್ ವಲಯದ ಬೆಳವಣಿಗೆಗೆ ಬೇಕಾದ ಮತ್ತು ಗ್ರಾಹಕರ ಅಗತ್ಯಗಳನ್ನು ಪೂರೈಸಲು ಕಾಯ್ದೆಯ ಕಾರ್ಯನಿರ್ವಹಣಾ ನಿಯಮ ಮತ್ತು ಸಾಂಸ್ಥಿಕ ಮೂಲಸೌಕರ್ಯಗಳ ಪ್ರಕ್ರಿಯೆ ಇಂದಿನಿಂದ ಆರಂಭವಾಗಲಿದೆ.
ಕೇಂದ್ರ ವಸತಿ ಮತ್ತು ನಗರ ಬಡತನ ನಿರ್ಮೂಲನ ಸಚಿವಾಲಯ(ಹೂಪಾ) ಕಾಯ್ದೆಯ ಒಟ್ಟು 92 ವರ್ಗಗಳಲ್ಲಿ 69 ರ ಅಧಿಸೂಚನೆ ಹೊರಡಿಸಲಾಗಿದೆ.
ರಿಯಲ್ ಎಸ್ಟೇಟ್ ಗೆ ಸಂಬಂಧಪಟ್ಟ ನೀತಿ ನಿಯಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇನ್ನು ಆರು ತಿಂಗಳ ಒಳಗೆ ರಚನೆ ಮಾಡಲಿವೆ.
Advertisement