ಕ್ಯಾನ್ಸರ್, ಎಚ್ ಐ ವಿ ಸೇರಿದಂತೆ ಅಗತ್ಯ ಔಷಧಗಳ ಬೆಲೆ ಇಳಿಕೆ

ಕ್ಯಾನ್ಸರ್‌, ಎಚ್‌ಐವಿ, ಬ್ಯಾಕ್ಟೀರಿಯಾ ಸೋಂಕುಗಳು, ಸೇರಿದಂತೆ 24 ಅಗತ್ಯ ಔಷಧಗಳ ಬೆಲೆಗೆ ಕೇಂದ್ರ ಸರ್ಕಾರ ಮಿತಿ ಹೇರಿದೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ : ಕ್ಯಾನ್ಸರ್‌, ಎಚ್‌ಐವಿ, ಬ್ಯಾಕ್ಟೀರಿಯಾ ಸೋಂಕುಗಳು, ಸೇರಿದಂತೆ 24 ಅಗತ್ಯ ಔಷಧಗಳ ಬೆಲೆಗೆ ಕೇಂದ್ರ ಸರ್ಕಾರ ಮಿತಿ ಹೇರಿದೆ.

ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ (ಎನ್‌ಪಿಪಿಎ) 24 ಔಷಧಗಳ ಬೆಲೆಯನ್ನು ಪರಿಷ್ಕರಿಸಿದೆ. ಔಷಧ (ಬೆಲೆ ನಿಯಂತ್ರಣ) ತಿದ್ದುಪಡಿ ಆದೇಶ 2016ರ ಪ್ರಕಾರ ಷೆಡ್ಯೂಲ್‌–1 ವಿಭಾಗದಲ್ಲಿ ಈ 24 ಔಷಧಗಳು ಬರುತ್ತವೆ. ಔಷಧ ಬೆಲೆಯಲ್ಲಿ ಸರಾಸರಿ ಶೇ 25ರಷ್ಟು ಕಡಿಮೆಯಾಗಿದೆ. ಕೆಲವು ಔಷಧಗಳ ಬೆಲೆ ಶೇ 10–15ರಷ್ಟು ಕಡಿಮೆಯಾಗಿದ್ದರೆ ಇತರ ಕೆಲವು ಔಷಧಗಳ ಬೆಲೆಯಲ್ಲಿ ಶೇ 30–35ರಷ್ಟು ಕಡಿಮೆಯಾಗಿದೆ ಎಂದು ಎನ್‌ಪಿಪಿಎ ಅಧ್ಯಕ್ಷ ಭೂಪೇಂದ್ರ ಸಿಂಗ್‌ ಹೇಳಿದ್ದಾರೆ.

ನಿರ್ದಿಷ್ಟ ವಿಭಾಗಗಳಲ್ಲಿ ಮಾರಾಟವಾಗುವ ಔಷಧಗಳ ಸರಳ ಸರಾಸರಿ ಆಧಾರದಲ್ಲಿ ಅಗತ್ಯ ಔಷಧ ಎಂದು ನಿರ್ಧರಿಸಿ ಬೆಲೆ ನಿಗದಿ ಮಾಡಲಾಗುತ್ತದೆ. ಒಟ್ಟು ಔಷಧ ಮಾರಾಟದಲ್ಲಿ ಶೇ ಒಂದಕ್ಕಿಂತ ಹೆಚ್ಚು ಮಾರಾಟವಾಗುವ ಔಷಧಗಳನ್ನು ಅಗತ್ಯ ಔಷಧ ಎಂದು ಪರಿಗಣಿಸಲಾಗುತ್ತದೆ. ಔಷಧಗಳ ಗರಿಷ್ಠ ಚಿಲ್ಲರೆ ಮಾರಾಟ ಬೆಲೆಯ (ಎಂಆರ್‌ಪಿ) ಮೇಲೆಯೂ ಎನ್‌ಪಿಪಿಎ ನಿಗಾ ಇರಿಸುತ್ತದೆ. ಷೆಡ್ಯೂಲ್‌ನಲ್ಲಿ ಇಲ್ಲದ ಔಷಧಗಳ ಬೆಲೆಯನ್ನು ಪ್ರತಿವರ್ಷ ಶೇ 10ರಷ್ಟು ಏರಿಸಲು ಅವಕಾಶ ನೀಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com