ಜಿಎಸ್ಟಿ ಮಸೂದೆ
ದೇಶ
ನಾಳೆ ರಾಜ್ಯಸಭೆಯಲ್ಲಿ ಜಿಎಸ್‌ಟಿ ಮಸೂದೆ ಮಂಡನೆ
ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಬಹುನಿರೀಕ್ಷಿತ ಸರಕು ಮತ್ತು ಸೇವಾ ತೆರೆಗೆ(ಜಿಎಸ್‌ಟಿ) ಮಸೂದೆಯನ್ನು ನಾಳೆ ರಾಜ್ಯಸಭೆಯಲ್ಲಿ ಮಂಡಿಸುವ ಸಾಧ್ಯತೆ...
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಬಹುನಿರೀಕ್ಷಿತ ಸರಕು ಮತ್ತು ಸೇವಾ ತೆರೆಗೆ(ಜಿಎಸ್‌ಟಿ) ಮಸೂದೆಯನ್ನು ನಾಳೆ ರಾಜ್ಯಸಭೆಯಲ್ಲಿ ಮಂಡಿಸುವ ಸಾಧ್ಯತೆ ಹೆಚ್ಚಳವಾಗಿದೆ.
ವಿಪಕ್ಷಗಳ ಸಲಹೆಯಂತೆ ಈಗಾಗಲೇ ಮಸೂದೆಗೆ ಕೆಲವೊಂದು ತಿದ್ದುಪಡಿ ತರಲು ಒಪ್ಪಿಸಿರುವ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಈ ಅಂಶಗಳನ್ನು ಮಸೂದೆಯಲ್ಲಿ ಸೇರಿಸಿ ಆದಷ್ಟು ಬೇಗ ಮಸೂದೆ ಮಂಡಿಸಲು ಹರಸಾಹಸ ನಡೆಸುತ್ತಿದೆ.
ಇನ್ನು ನಾಳೆ ರಾಜ್ಯಸಭೆಯಲ್ಲಿ ಮಸೂದೆ ಮಂಡನೆಯಾಗಲಿದ್ದು ಮುಂದಿನ ಮೂರು ದಿನಗಳು ಕಾಲ ಕಲಾಪದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ತನ್ನೆಲ್ಲಾ ಸದಸ್ಯರಿಗೆ ಬಿಜೆಪಿ ವಿಪ್ ಜಾರಿ ಮಾಡಿದೆ.
ಜಿಎಸ್ಟಿ ಮಸೂದೆ ಅಂಗೀಕಾರ ಖಚಿತ
ಜಿಎಸ್ಟಿ, ಸಾಂವಿಧಾನಿಕ ತಿದ್ದುಪಡಿ ಮಸೂದೆಯಾಗಿರುವ ಹಿನ್ನಲೆಯಲ್ಲಿ ಅದಕ್ಕೆ ರಾಜ್ಯಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. ಸದ್ಯ ರಾಜ್ಯಸಭೆಯಲ್ಲಿ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಸಹ ವಿಧೇಯಕಕ್ಕೆ ಸಹಮತ ತೋರಿಸಿರುವುದರಿಂದ ಈ ಬಾರಿ ಮಸೂದೆ ಪಾಕ್ ಆಗುವ ಖಚಿತ ವಿಶ್ವಾಸ ಸರ್ಕಾರಕ್ಕಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ