'ಆಪ್ ಸಂಸದ ಭಗವಂತ್ ಮಾನ್ ರನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸಿ'

ರಹಸ್ಯ ಕ್ಯಾಮರಾ ಮೂಲಕ ಸಂಸತ್ ಭವನದಲ್ಲಿ ಭದ್ರತಾ ತಪಾಸಣಾ ಪ್ರಕ್ರಿಯೆ ಹೇಗಿರುತ್ತದೆ ಎಂಬುದರ ಕುರಿತು ವಿಡಿಯೋ ಮಾಡಿ ಫೇಸ್ ಬುಕ್ ನಲ್ಲಿ...
ಭಗವಂತ್ ಮಾನ್
ಭಗವಂತ್ ಮಾನ್
ನವದೆಹಲಿ: ರಹಸ್ಯ ಕ್ಯಾಮರಾ ಮೂಲಕ ಸಂಸತ್ ಭವನದಲ್ಲಿ ಭದ್ರತಾ ತಪಾಸಣಾ ಪ್ರಕ್ರಿಯೆ ಹೇಗಿರುತ್ತದೆ ಎಂಬುದರ ಕುರಿತು ವಿಡಿಯೋ ಮಾಡಿ ಫೇಸ್ ಬುಕ್ ನಲ್ಲಿ ಪ್ರಸಾರ ಮಾಡಿದ್ದ ಆಮ್ ಆದ್ಮಿ ಪಕ್ಷದ ವಿವಾದಾತ್ಮಕ ಸಂಸದ ಭಗವಂತ್ ಮಾನ್ ಅವರನ್ನು ಡ್ರಗ್ ಮತ್ತು ಕುಡಿತ ಚಟ ಬಿಡಿಸಲು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿ ಎಂದು ಸಂಸದರ ತಂಡವೊಂದು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ಪತ್ರ ಬರೆದಿದ್ದಾರೆ.
ಅಕಾಲಿ ದಳದ ಪ್ರೇಮ್ ಸಿಂಗ್ ಚಂದುಮಜ್ರ, ಬಿಜೆಪಿಯ ಮಹೀಶ್ ಗಿರಿ ಮತ್ತು ಅಮಾನತುಗೊಂಡ ಎಎಪಿ ಸಂಸದ ಹರಿಂದರ್ ಸಿಂಗ್ ಖಲ್ಸಾ ಅವರನ್ನೊಳಗೊಂಡ ಸಂಸದರ ತಂಡ, ಲೋಕಸಭೆಯ ವೆಚ್ಚದಲ್ಲೇ ಡ್ರಗ್ಸ್ ಮತ್ತು ಕುಡಿತಕ್ಕೆ ದಾಸನಾಗಿರುವ ಭಗವಂತ್ ಮಾನ್ ಅವರನ್ನು ಪುನರ್ವಸತಿ ಕೇಂದ್ರಕ್ಕೆ ಕಳಿಸಿದರೆ ಒಳ್ಳೆಯದು ಎಂದು ಹೇಳಿದ್ದಾರೆ.
ಪುನರ್ವಸತಿ ಕೇಂದ್ರಕ್ಕೆ ಹೋಗಿ ಬಂದ ನಂತರವೇ ಭಗವಂತ್ ಮಾನ್ ಅವರಿಗೆ ಸಂಸತ್ ಕಲಾಪದಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂದು ಸಂಸದರ ತಂಡ ಪತ್ರದ ಮೂಲತ ಸ್ಪೀಕರ್ ಗೆ ಒತ್ತಾಯಿಸಿದೆ.
ಈಗಾಗಲೇ ಭಗವಂತ್ ಮಾನ್ ವಿಡಿಯೋ ಪ್ರಕರಣದ ತನಿಖೆ ನಡೆಸಲು ಸ್ಪೀಕರ್ ಸುಮಿತ್ರಾ ಮಹಾಜನ್ ಅವರು 9 ಸದಸ್ಯರ ಸಮಿತಿಯೊಂದನ್ನು ರಚಿಸಿದ್ದಾರೆ. ಆದರೆ ಈ ಸಮಿತಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಿ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com