ಬೆಲೆ ಏರಿಕೆಗೆ ಕಾಳಸಂತೆಯೇ ಪ್ರಧಾನ ಕಾರಣವಲ್ಲ: ಅರುಣ್ ಜೇಟ್ಲಿ

ಆಹಾರ ಹಣದುಬ್ಬರಕ್ಕೆ ಕಾಳಸಂತೆಯೇ ಪ್ರಧಾನ ಕಾರಣವಲ್ಲ ಎಂದಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಬೇಡಿಕೆ ಮತ್ತು ಪೂರೈಕೆ ನಡುವಿನ ವ್ಯತ್ಯಾಸ, ಜಾಗತಿಕ ಮಟ್ಟದಲ್ಲಿ ಬೆಲೆ ಏರಿಕೆ ಪ್ರವೃತ್ತಿಯ ಅಂಶಗಳೂ ಕಾರಣವಾಗಲಿವೆ
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ

ನವದೆಹಲಿ: ಆಹಾರ ಹಣದುಬ್ಬರಕ್ಕೆ ಕಾಳಸಂತೆಯೇ ಪ್ರಧಾನ ಕಾರಣವಲ್ಲ ಎಂದಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಬೇಡಿಕೆ ಮತ್ತು ಪೂರೈಕೆ ನಡುವಿನ ವ್ಯತ್ಯಾಸ, ಜಾಗತಿಕ ಮಟ್ಟದಲ್ಲಿ ಬೆಲೆ ಏರಿಕೆ ಪ್ರವೃತ್ತಿಯ ಅಂಶಗಳೂ ಕಾರಣವಾಗಲಿವೆ ಎಂದು ಹೇಳಿದ್ದಾರೆ.

ಅಗತ್ಯ ಪದಾರ್ಥಗಳ ಬೆಲೆ ಏರಿಕೆ ಹಾಗೂ ಆಹಾರ ಹಣದುಬ್ಬರಕ್ಕೆ ಕಾರಣವಾಗುವ ಅಂಶಗಳಲ್ಲಿ ಕಾಳಸಂತೆಯೂ ಸಹ ಒಂದು, ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ಹಲವು ಕಾರಣಗಳಿವೆ ಎಂದು ಲೋಕಸಭೆಯಲ್ಲಿ ಅರುಣ್ ಜೇಟ್ಲಿ ತಿಳಿಸಿದ್ದಾರೆ. ಆಹಾರ ಹಣದುಬ್ಬರಕ್ಕೆ ಕಾರಣವಾಗಿರುವ ಅಂಶಗಳ ಬಗ್ಗೆ ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿರುವ ಅರುಣ್ ಜೇಟ್ಲಿ, ಹಲವು ಅಧ್ಯಯನ ವರದಿಗಳ ಉದಾಹರಣೆ ನೀಡಿ, ವಿತ್ತೀಯ ಕೊರತೆ, ಜಾಗತಿಕ ಆಹಾರ ಹಣದುಬ್ಬರ, ಸ್ಥಳೀಯ ವೇತನ ಗಳು ಭಾರತದಲ್ಲಿ ಆಹಾರ ಹಣದುಬ್ಬರಕ್ಕೆ ಕಾರಣವಾಗುತ್ತಿರುವ ಅಂಶಗಳೆಂದು ತಿಳಿಸಿದ್ದಾರೆ. ಬೇರೆ ಅಂಶಗಳ ಹೊರತಾಗಿಯೂ ಕೇಂದ್ರ ಸರ್ಕಾರ ಆಹಾರ ಹಣದುಬ್ಬರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತಿದೆ ಎಂದು ಅರುಣ್ ಜೇಟ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com