

ನವದೆಹಲಿ: ಸಂಸತ್ ನಲ್ಲಿ ತಮ್ಮ ಪಾಕಿಸ್ತಾನ ಪ್ರವಾಸದ ಬಗ್ಗೆ ಮಾತನಾಡಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ತಮಗೆ ಪಾಕಿಸ್ತಾನದಲ್ಲಿ ದೊರೆತ ಪ್ರತಿಕ್ರಿಯೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ಪಾಕಿಸ್ತಾನ ಪಾಠ ಕಲಿಯುವುದಿಲ್ಲ ಎಂದು ಹೇಳಿದ್ದಾರೆ.
ಪಾಕಿಸ್ತಾನದೊಂದಿಗೆ ಸೌಹಾರ್ದಯುತ ಸಂಬಂಧವನ್ನು ಬೆಳೆಸಲು ಭಾರತದ ಎಲ್ಲಾ ಪ್ರಧಾನಿಗಳೂ ಶ್ರಮಿಸಿದ್ದಾರೆ. ಆದರೆ ಎಷ್ಟೇ ಪ್ರಯತ್ನಿಸಿದರೂ ಪಾಕಿಸ್ತಾನ ಮಾತ್ರ ಪಾಠ ಕಲಿಯುವುದಿಲ್ಲ ಎಂದು ರಾಜನಾಥ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮ್ಮ ಸ್ನೇಹಿತರನ್ನು ನಾವು ಬದಲಿಸಬಹುದು. ಆದರೆ ನೆರೆಯವರನ್ನಲ್ಲ. ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದೊಂದಿಗೆ ಸ್ನೇಹಯುತವಾಗಿಯೇ ಇದ್ದಾರೆ ಆದರೆ ಪಾಕಿಸ್ತಾನ ಮಾತ್ರ ಪಾಠ ಕಲಿಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಸಾರ್ಕ್ ಸಭೆಯಲ್ಲಿ ಪಾಲ್ಗೊಳ್ಳಲು ಇಸ್ಲಾಮಾಬಾದ್ ಗೆ ತೆರಳಿದ್ದ ರಾಜನಾಥ್ ಸಿಂಗ್ ಅವರನ್ನು ಸ್ವಾಗತಿಸುವ ವೇಳೆ ಪಾಕಿಸ್ತಾನ ಶಿಷ್ಟಾಚಾರ ಪಾಲಿಸದೆ ಇದ್ದ ಪಾಕಿಸ್ತಾನದ ನಡೆಯನ್ನು ಜೆಡಿಯು ನಾಯಕ ಶರದ್ ಯಾದವ್ ಖಂಡಿಸಿದ್ದಾರೆ.