ವೈಷ್ಣೋದೇವಿ ಬಳಿ ಭೂಕುಸಿತ: 3 ಯಾತ್ರಿಕರು ಸೇರಿ 4 ಸಾವು

ಭಾರಿ ಮಳೆಯಿಂದಾಗಿ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಮಾತಾ ವೈಷ್ಣೋದೇವಿ ದೇವಾಲಯಕ್ಕೆ ಹೋಗುವ ಮಾರ್ಗದಲ್ಲಿ ಭೂಕುಸಿತ ಸಂಭವಿಸಿದ್ದು ಮೂವರು...
ವೈಷ್ಣೋದೇವಿ ದೇವಾಲಯ
ವೈಷ್ಣೋದೇವಿ ದೇವಾಲಯ
Updated on

ಜಮ್ಮು: ಭಾರಿ ಮಳೆಯಿಂದಾಗಿ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಮಾತಾ ವೈಷ್ಣೋದೇವಿ ದೇವಾಲಯಕ್ಕೆ ಹೋಗುವ ಮಾರ್ಗದಲ್ಲಿ ಭೂಕುಸಿತ ಸಂಭವಿಸಿದ್ದು ಮೂವರು ಯಾತ್ರಿಕರು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.

ಬೆಂಗಾಂಗ-ಅರ್ಧಕುವಾರಿ ರಸ್ತೆಯಲ್ಲಿ ಭೂಕುಸಿತ ಸಂಭವಿಸಿದ್ದು, ಯಾತ್ರಿಕರು ವಿಶ್ರಾಂತಿ ಪಡೆಯುತ್ತಿದ್ದ ಶೆಲ್ಟರ್ ಮೇಲೆ ಮಣ್ಣಿನ ಅವಶೇಷ ಬಿದ್ದು ನಾಲ್ವರು ಸಾವನ್ನಪಿದ್ದು, 9 ಮಂದಿಗೆ ಗಾಯವಾಗಿದೆ ಎಂದು ಶ್ರೀ ಮಾತಾ ವೈಷ್ಣೋದೇವಿ ದೇವಾಲಯ ಮಂಡಳಿಯ ಮುಖ್ಯ ಎಕ್ಸಿಕ್ಯೂಟಿವ್ ಅಧಿಕಾರಿ ಅಜೀತ್ ಸಾಹು ತಿಳಿಸಿದ್ದಾರೆ.

ಮೃತರಲ್ಲಿ ಬೆಂಗಳೂರಿನ ಶಶಿಧರ್ ಕುಮಾರ್(29), ಛತ್ತೀಸ್ ಗಢದ ಬಿಂದು ಸಾಹ್ನಿ(30) ಮತ್ತು ಆಕೆಯ 5 ವರ್ಷದ ಮಗ ವಿಶಾಲ್ ಹಾಗೂ ರಿಯಾಸಿಯ ಸಾದಿಕ್ ಎಂಬುದಾಗಿ ಗುರುತಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com