ಕನ್ವರ್ ಯಾತ್ರೆ ಕೆಲಸವಿಲ್ಲದವರು ಮಾಡುವ ಕೆಲಸ: ಶರದ್ ಯಾದವ್

ಸಂಯುಕ್ತ ಜನತಾ ದಳ ಜೆಡಿಯು ಮುಖಂಡ ಶರದ್ ಯಾದವ್ ಕನ್ವರ್ ಯಾತ್ರೆಯನ್ನು ಟೀಕಿಸಿದ್ದು, ಕೆಲಸವಿಲ್ಲದವರು ಮಾಡುವ ಯಾತ್ರೆ ಎಂದು ಹೇಳಿದ್ದಾರೆ.
ಶರದ್ ಯಾದವ್
ಶರದ್ ಯಾದವ್

ನವದೆಹಲಿ: ಸಂಯುಕ್ತ ಜನತಾ ದಳ (ಜೆಡಿಯು) ಮುಖಂಡ ಶರದ್ ಯಾದವ್ ಕನ್ವರ್ ಯಾತ್ರೆಯನ್ನು ಟೀಕಿಸಿದ್ದು, ಕೆಲಸವಿಲ್ಲದವರು ಮಾಡುವ ಯಾತ್ರೆ ಎಂದು ಹೇಳಿದ್ದಾರೆ. ಶರದ್ ಯಾದವ್ ಅವರ ಈ ಹೇಳಿಕೆ ಶಿವ ಭಕ್ತರಿಗೆ ಅವಮಾನ ಮಾಡುವಂತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕನ್ವರ್ ಯಾತ್ರೆಯಲ್ಲಿ ಪಾಲ್ಗೊಳ್ಳುವ ಸಾವಿರಾರು ಜನರ ಗುಂಪು ದೇಶದಲ್ಲಿ ನಿರುದ್ಯೋಗವಿದೆ ಎಂಬುದನ್ನು ತೋರಿಸುತ್ತದೆ ಎಂದು ಜೆಡಿಯು ಮುಖಂಡ ಶರದ್ ಯಾದವ್ ತಿಳಿಸಿದ್ದಾರೆ. ಉದ್ಯೋಗವಿದ್ದಿದ್ದರೆ ಕನ್ವರ್ ಯಾತ್ರೆಯಲ್ಲಿ ಪಾಲ್ಗೊಳ್ಳುವವರ ಸಂಖ್ಯೆಯೂ ಕಡಿಮೆ ಇರುತ್ತಿತ್ತು ಎಂದು ಶರದ್ ಯಾದವ್ ಅಭಿಪ್ರಾಯಪಟ್ಟಿದ್ದಾರೆ.

ಪವಿತ್ರ ಶ್ರಾವಣ ಮಾಸದಲ್ಲಿ ಶಿವನಿಗೆ ಗಂಗಾ ನದಿಯ ನೀರಿನಿಂದ ಪೂಜೆ ಸಲ್ಲಿಸುವ ಮೂಲಕ ಕನ್ವರ್ ಯಾತ್ರೆ ನಡೆಸಲಾಗುತ್ತದೆ. ಆದರೆ ಇದನ್ನು ನಿರುದ್ಯೋಗಕ್ಕೆ ತಾಲೂಕು ಹಾಕುವ ಮೂಲಕ ಶಿವ ಭಕ್ತರಿಗೆ ಶರದ್ ಯಾದವ್ ಅವಮಾನ ಮಾಡಿದ್ದಾರೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com