ಕಾಶ್ಮೀರಿಗಳಿಗೆ ಚಿಕಿತ್ಸೆ: ಅವಕಾಶಕ್ಕಾಗಿ ಅಂತಾರಾಷ್ಟ್ರೀಯ ಸಮುದಾಯದ ಮೇಲೆ ಪಾಕ್ ಒತ್ತಡ

ಕಾಶ್ಮೀರದಲ್ಲಿ ಉಗ್ರ ಮುಜಾಫರ್ ಬುರ್ಹಾನ್ ವನಿ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದ ವೇಳೆ ಗಾಯಗೊಂಡವರಿಗೆ ಪಾಕಿಸ್ತಾನ ವೈದ್ಯಕೀಯ ನೆರವು ನೀಡಲು ಮುಂದಾಗಿದೆ.
ಪಾಕಿಸ್ತಾನ ಪ್ರಧಾನಿ
ಪಾಕಿಸ್ತಾನ ಪ್ರಧಾನಿ

ಇಸ್ಲಾಮಾಬಾದ್: ಕಾಶ್ಮೀರದಲ್ಲಿ ಉಗ್ರ ಮುಜಾಫರ್ ಬುರ್ಹಾನ್ ವನಿ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದ ವೇಳೆ ಗಾಯಗೊಂಡವರಿಗೆ ಪಾಕಿಸ್ತಾನ ವೈದ್ಯಕೀಯ ನೆರವು ನೀಡಲು ಮುಂದಾಗಿದೆ.
ಕಾಶ್ಮೀರದ ಗಾಯಾಳುಗಳಿಗೆ ವೈದ್ಯಕೀಯ ನೆರವು ನೀಡಲು ಪಾಕಿಸ್ತಾನಕ್ಕೆ ಅವಕಾಶ ನೀಡುವಂತೆ ಭಾರತಕ್ಕೆ ಮನವಿ ಮಾಡಲು ಅಂತಾರಾಷ್ಟ್ರೀಯ ಸಮುದಾಯಕ್ಕೆ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಕರೆ ನೀಡಿದ್ದಾರೆ.
ಉಗ್ರ ವನಿಯ ಹತ್ಯೆಯನ್ನು ಖಂಡಿಸಿ ನಡೆದಿರುವ ಪ್ರತಿಭಟನೆಯಲ್ಲಿ ಈ ವರೆಗೂ 55 ಜನರು ಮೃತಪಟ್ಟಿದ್ದು, ಪೆಲ್ಲೆಟ್ ಗನ್ ಗಳಿಂದ ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ಪಾಕಿಸ್ತಾನ ಯತ್ನಿಸುತ್ತಿದ್ದು, ಗಡಿ ರಹಿತ ವೈದ್ಯರೆಂದೇ ಗುರುತಿಸಲ್ಪಡುವ ಮೆಡಿಸಿನ್ಸ್ ಸಾನ್ಸ್ ಫ್ರಾಂಟಿಯರ್ಸ್(ಎಂ ಎಸ್ ಎಫ್) ಗು ಈ ಕುರಿತು ಮನವಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com