
ನವದೆಹಲಿ: ನಕಲಿ ಗೋರಕ್ಷಕರನ್ನು ಕಠಿಣವಾಗಿ ಶಿಕ್ಷಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ಕೆಲ ಹಿಂದು ಸಂಘಟನೆಗಳು ತೀವ್ರವಾಗಿ ವಿರೋಧಿಸಿದ್ದು, ಮೋದಿ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲು ಚಿಂತನೆ ನಡೆಸಿದೆ.
ದೇಶದ ಗೋರಕ್ಷಕರಲ್ಲಿ ಶೇ. 80ರಷ್ಟು ನಕಲಿಗಳಿದ್ದಾರೆ ಎಂಬ ಮೋದಿ ಹೇಳಿಕೆಯನ್ನು ಹಿಂದ ಮಹಾಸಭಾ ಖಂಡಿಸಿದ್ದು, 2004ರಲ್ಲಿ ಅಟಲ್ ಬಿಹಾರಿ ವಾಜಪೇಯ ಅವರಿಗೆ ಯಾವ ಸ್ಥಿತಿ ಬಂತೋ ಅದೇ ಸ್ಥಿತಿ ನರೇಂದ್ರ ಮೋದಿ ಅವರಿಗೂ ಬರಲಿದೆ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ನರೇಂದ್ರ ಮೋದಿ ಅವರಿಗೆ ಸದ್ಬುದ್ಧಿ ಬರಲು ದೇಶಾದ್ಯಂತ ಹಿಂದು ಮಹಾಸಭಾ ಬುದ್ಧಿ-ಶುದ್ಧಿ ಯಾಗವನ್ನು ಹಮ್ಮಿಕೊಳ್ಳಲಿದೆ ಎಂದು ಹಿಂದು ಮಹಾಸಭಾದ ಅಧ್ಯಕ್ಷ ಚಂದ್ರಪ್ರಕಾಶ್ ಕೌಶಿಕ್ ಹೇಳಿದ್ದಾರೆ.
Advertisement