ದೇವಾಲಯದಲ್ಲಿ ರಾವಣನ ವಿಗ್ರಹ ಪ್ರತಿಷ್ಠಾಪಿಸಲು ಹಿಂದೂ ಅರ್ಚಕರ ವಿರೋಧ

ದೇವಾಲಯದಲ್ಲಿ ರಾವಣನ ಪ್ರತಿಮೆ ಸ್ಥಾಪಿಸುವುದಕ್ಕೆ ದೇವಾಲಯದ ಮುಖ್ಯ ಅರ್ಚಕ ವಿರೋಧ ವ್ಯಕ್ತ ಪಡಿಸಿರುವ ಘಟನೆ ಗ್ರೇಟರ್ ನೊಯ್ಡಾದ ಬಿಸರಾಕ್ ನಲ್ಲಿ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗ್ರೇಟರ್ ನೊಯ್ಡಾ: ದೇವಾಲಯದಲ್ಲಿ ರಾವಣನ ಪ್ರತಿಮೆ ಸ್ಥಾಪಿಸುವುದಕ್ಕೆ ದೇವಾಲಯದ ಮುಖ್ಯ ಅರ್ಚಕ ವಿರೋಧ ವ್ಯಕ್ತ ಪಡಿಸಿರುವ ಘಟನೆ ಗ್ರೇಟರ್ ನೊಯ್ಡಾದ ಬಿಸರಾಕ್ ನಲ್ಲಿ ನಡೆದಿದೆ.

ಗಾಜಿಯಾಬಾದ್ ನ ದುದೇಶ್ವರ್ ನಾಥ್ ದೇವಾಲಯದ ಮುಖ್ಯ ಅರ್ಚಕ ಮಹಾಂತ್ ನಾರಾಯಣ ಗಿರಿ ಹಾಗೂ ದಾಸ್ನಾ ದಲ್ಲಿರುವ ಚಂಡಿದೇವಿ ದೇವಾಲಯದ ಮುಖ್ಯ ಅರ್ಚಕ ಯತಿ ನರಿನ್ ಮನ್, ದೇವಾಲಯದಲ್ಲಿ ರಾವಣನ ವಿಗ್ರಹ ಸ್ಥಾಪನೆಗೆ ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ. ರಾವಣ ದುಷ್ಟ ಶಕ್ತಿಯ ಸಂಕೇತ. ಹೀಗಾಗಿ ಪಶ್ಚಿಮ ಉತ್ತರಪ್ರದೇಶದ ಯಾವ ಭಾಗದಲ್ಲಿಯೂ ರಾವಣನ ಪ್ರತಿಮೆ ಸ್ಥಾಪಿಸಬಾರದು ಎಂದು ಆಗ್ರಹಿಸಿದ್ದಾರೆ.

ಮಹಾತ್ಮ ರಾವಣ ಟೆಂಪಲ್ ಟ್ರಸ್ಟ್ ಮತ್ತು ಶಿವಮೋಹನ್ ದೇವಾಲಯ ಟ್ರಸ್ಟ್ ಸೇರಿ ರಾವಣನ ದೊಡ್ಡ ದೇವಾಲಯ ನಿರ್ಮಿಸುವ ಪ್ರಸ್ತಾಪ ಮಾಡಿತ್ತು. ಅದರಂತೆ ದೇವಾಲಯವನ್ನು ಸಹ ನಿರ್ಮಾಣಮಾಡಲಾಗಿದೆ. ಆಗಸ್ಟ್ 11 ರಂದು ಮಂದಿರದಲ್ಲಿ ರಾವಣನ ಪ್ರತಿಮೆಯನ್ನು ಸ್ಥಾಪಿಸುವುದಾಗಿ ಟ್ರಸ್ಟ್ ಹೇಳಿದೆ.

ಆದರೆ ಯಾವುದೇ ಕಾರಣಕ್ಕೂ ರಾವಣನ ಪ್ರತಿಮೆ ಸ್ಥಾಪಿಸಬಾರದೆಂದು ಮುಖ್ಯ ಅರ್ಚಕರು ಪಟ್ಟು ಹಿಡಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com