
ಪಾಟ್ನಾ: ಕಾಶ್ಮೀರ ಕಣಿವೆಯಲ್ಲಿ ಉಂಟಾಗಿರುವ ಹಿಂಸಾಚಾರವನ್ನು ಸರಿದಾರಿಗೆ ತರಲು ಪ್ರಧಾನಿ ಮೋದಿ ಮಾತನಾಡುವ ಬದಲು ತಮ್ಮ ಬುದ್ದಿ ಉಪಯೋಗಿಸಬೇಕು ಎಂದು ಜೆಡಿಯು ವಕ್ತಾರ ನೀರಜ್ ಕುಮಾರ್ ಸಲಹೆ ನೀಡಿದ್ದಾರೆ.
ಕಾಶ್ಮೀರಿ ಪಂಡಿತರ ಸಮಸ್ಯೆ ಪರಿಹರಿಸಲು ಮೋದಿ ವಿಫಲವಾಗಿದ್ದಾರೆ ಎಂದು ಆರೋಪಿಸಿರುವ ಅವರು, ಸ್ವಾತಂತ್ರ್ಯ ಹೋರಾಟಗಾರ ಚಂದ್ರ ಶೇಖರ್ ಆಜಾದ್ ಅವರ ಹುಟ್ಟೂರಿನಲ್ಲಿ ಆಯೋಜಿಸಿದ್ದ ರ್ಯಾಲಿಯಲ್ಲಿ ಭಾಗವಹಿಸಿದ್ದ ಮೋದಿ ತಮ್ಮ ಭಾಷಣದಲ್ಲಿ ಎಲ್ಲಿಯೂ ಕಾಶ್ಮೀರ ಪಂಡಿತರ ಸಮಸ್ಯೆ ಬಗ್ಗೆ ಮಾತನಾಡಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ಇಡೀ ದೇಶದ ಜವಾಬ್ದಾರಿ ನಿಮ್ಮ ಮೇಲಿದೆ. ಅಧಿಕಾರಕ್ಕೂ ಬರುವ ಮುನ್ನ ಭರವಸೆ ನೀಡಿದ್ದೀರಿ. ನೀವು ಚಂದ್ರಶೇಖರ್ ಆಜಾದ್ ಅವರು ಹುಟ್ಟೂರಿಗೆ ಭೇಟಿ ನೀಡಿದಾಗ ಅಲ್ಲಿನ ಸಭೆಯಲ್ಲಿ ಕಾಶ್ಮೀರ ಪಂಡಿತರ ಸಮಸ್ಯೆ ಬಗ್ಗೆ ಪ್ರಸ್ತಾಪ ಮಾಡುತ್ತೀರಿ ಎಂದು ನಾವೆಲ್ಲಾ ನಿರೀಕ್ಷಿಸಿದ್ದೆವು, ಆದರೆ ನೀವು ಒಂದು ಮಾತನಾಡದೇ ಇದ್ದುದ್ದು ನಮಗೆ ಬೇಸರ ತರಿಸಿದೆ ಎಂದು ಹೇಳಿದ್ದಾರೆ.
Advertisement