
ನವದೆಹಲಿ: ವಿಗ್ ಅಥವಾ ಕತಕ ಗಡ್ಡ ಧರಿಸಿ ನಮಾಜು ಮಾಡಿದರೆ, ಅದು ಅಪೂರ್ಣವಾಗುತ್ತದೆ ಎಂದು ಇಸ್ಲಾಮಿಕ್ ಧಾರ್ಮಿಕ ಬೋಧನಾ ಕೇಂದ್ರ ದಾರುಲ್ ಉಲೂಮ್ ಫತ್ವಾ ಹೊರಡಿಸಿದೆ.
ನಮಾಜ್ ಗೆ ಮೊದಲು ಕೈ, ಮುಖ ಹಾಗೂ ತಲೆಯನ್ನು ತೊಳೆದುಕೊಳ್ಳುವುದು (ವಝು) ಮತ್ತು ಇಡಿಯ ದೇಹವನ್ನು ಶುದ್ಧಗೊಳಿಸುವುದು (ಗುಸ್‌ಲ್) ಕಡ್ಡಾಯವಾಗಿದ್ದು ಇವೆರಡೂ ಧಾರ್ಮಿಕ ಕ್ರಿಯೆಗಳಾಗಿವೆ. ಆದರೆ ವಿಗ್ ಧರಿಸಿಕೊಂಡರೆ ತಲೆಗೆ ಹಾಕಿಕೊಳ್ಳುವ ನೀರು ತಲೆಯ ಒಳಭಾಗವನ್ನು ಸೇರುವುದಿಲ್ಲ. ಹಾಗಾಗಿ ವಝು ಮತ್ತು ಗುಸ್‌ಲ್ ಉದ್ದೇಶಗಳು ಈಡೇರುವುದಿಲ್ಲ ಎಂದು ಧಾರ್ಮಿಕ ಬೋಧನಾ ಕೇಂದ್ರದ ವಕ್ತಾರ ಅಶ್ರಫ್ ಉಸ್ಮಾನಿ ಹೇಳಿದ್ದಾರೆ.
ವಿಗ್ ಧರಿಸಿಕೊಳ್ಳುವುದು ತಮಗೆ ಅತೀ ಅಗತ್ಯ ಎಂದು ಭಾವಿಸಿಕೊಳ್ಳುವವರು ಕನಿಷ್ಠ ನಮಾಜು ಮಾಡುವಾಗ ಅದನ್ನು ತೆಗೆದಿರಿಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ಈ ಮೊದಲು ದರೂಲ್ ಉಲೂಮ್ ಮುಸ್ಲಿಮ್ ಪುರುಷರು ಶೇವಿಂಗ್ ಮಾಡುವುದು ದೊಡ್ಡ ಪಾಪ ಎಂದು ಹೇಳಲಾಗಿತ್ತು.
Advertisement